ಗೋಕರ್ಣ ಫಾರ್ಮ್‌ ಹೌಸ್‌ನಲ್ಲಿ ವೇಶ್ಯಾವಾಟಿಕೆ -ಮೂವರ ಬಂಧನ

Prostitution-in-Gokarna-Farm-House-Three-Arrested
Published on

ಗೋಕರ್ಣ:ತಮ್ಮ ಲಾಭಕ್ಕಾಗಿ ಮಹಿಳೆಯರ ಪರಿಸ್ಥಿಯನ್ನು ದುರುಪಯೋಗ ಪಡಿಸಿಕೊಂಡು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಕರೆಯಿಸಿ ಲೈಂಗಿಕ ಶೋಷಣೆಗೆ ಒಳಪಡಿಸಿದ ಮೂವರು ಮಹಿಳೆಯರನ್ನು ಸ್ಥಳೀಯ ಪೊಲೀಸ್ ಇನಸ್ಪೆಕ್ಟರ್ ವಸಂತ ಆಚಾರ್ಯ ನೇತೃತ್ವದಲ್ಲಿ ಶನಿವಾರ ದಾಳಿ ನಡೆಸಿದ ಪೊಲೀಸರು ಎಲ್ಲರನ್ನು ರಕ್ಷಿಸಿದ ಘಟನೆ ನಡೆದಿದೆ.ಖಚಿತ ಮಾಹಿತಿಯ ಮೇರೆಗೆ ಇಲ್ಲಿನ ಖಾಸಗಿ ಫಾರ್ಮ್ಹೌಸ್ ಒಂದರ ಮೇಲೆ ದಾಳಿ ಮಾಡಲಾಗಿದ್ದು ಈ ವೇಳೆ ಬೆಂಗಳೂರು,ಮೈಸೂರು ಮತ್ತು ಚಿತ್ರದುರ್ಗದ ತಲಾ ಓರ್ವ ಮಹಿಳೆಯರನ್ನು ಆಪಾದಿತರಿಂದ ರಕ್ಷಿಸಲಾಗಿದೆ.ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಚಿತ್ರದುರ್ಗದ ರಫೀಉಲ್ಲಾ ಅಬ್ದುಲ್ ಜಾಹೆರ್‌ಸಾಬ,ಹರ್ಷಿದಾಬಾನು ಮಹಮ್ಮದ ಇಲಿಯಾಸ್ ಮತ್ತು ಫಾರ್ಮ್ಹೌಸ್ ನಡೆಸುತ್ತಿದ್ದ ಸಚಿನ್ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ದಾಳಿಯಲ್ಲಿ ಪಿಎಸ್‌ಐ ಸುಧಾ ಅಘನಾಶಿನಿ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net