

ಉಡುಪಿ : ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರ ಬಂಧನ ಮಾಡಿ 5 ಮಂದಿ ಯುವತಿಯರ ರಕ್ಷಣೆ ಮಾಡಿದ್ದಾರೆ.
ಅನೈತಿಕ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ಸಲಾಮತ್, ಚಂದ್ರಹಾಸ ಬಂಧಿತರು. ವ್ಯವಹಾರ ನಡೆಸಲು ಬಳಸಿಕೊಂಡಿದ್ದ 5 ಜನ ನೊಂದ ಮಹಿಳೆಯರಲ್ಲಿ 3 ಜನ ಬೆಂಗಳೂರು ಮೂಲದ ನಿವಾಸಿಗಳಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈ ವಾಸಿಗಳಾಗಿದ್ದು, ಅವರನ್ನು ರಕ್ಷಿಸಲಾಯಿತು.
4 ಮೊಬೈಲ್ ಫೋನ್, 1 ಕಾರು , 2 ಮೋಟಾರ್ ಸೈಕಲ್ ಹಾಗೂ ನಗದು ರೂ 10,000 ಸ್ವಾದೀನಪಡಿಸಿಕೊಂಡು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅನೈತಿಕ ಚಟುವಡಟಿಕೆ ಮಾಡಲು ಕೊಠಡಿಗಳನ್ನು ಒದಗಿಸಿದ ಪ್ರಮುಖ ಆರೋಪಿ ಖಾಲಿದ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.