

ಹುಬ್ಬಳ್ಳಿ: ಹೊರ ರಾಜ್ಯದಿಂದ ಮಹಿಳೆಯರನ್ನು ಕರೆಯಿಸಿ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಿ, ಮಹಿಳೆಯನ್ನು ರಕ್ಷಿಸಲಾಗಿದೆ.
ರಾಜ್ ಅಹ್ಮದ್ ಕೊಲ್ಹಾಪುರ ಬಂಧಿತ. ಕಲ್ಯಾಣನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಡಿ ಬಂಧಿಸಲಾಗಿದೆ ಎಂದಿರುವ ಪೊಲೀಸರು, ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.