ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರ ಸೆರೆ

download
Published on

ಕೋಲಾರ

ನಗರದ ಜನವಸತಿ ಪ್ರದೇಶದಲ್ಲಿ ಮನೆ ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಮಹಿಳಾ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸಿ, ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಬಂಧಿಸಿದ್ದಾರೆ.

ಪೇಟೆಚಾಮನಹಳ್ಳಿ ಬಡಾವಣೆಯ ಮುನಿರಾಜು ಎಂಬಾತನಿಗೆ ಸೇರಿದ ಮನೆಯನ್ನು ಹುತ್ತೂರು ಹೋಬಳಿ ಹೊಳಲಿಯ ಸಂತೋಷ ಮತ್ತು ಜಯನಗರದ ಸರಿತಾ ಬಾಡಿಗೆಗೆ ಪಡೆದಿದ್ದು, ಕೀಲುಕೋಟೆಯ ಆಟೋಚಾಲಕ ನವೀನ್‌ಕುಮಾರ್ ಜತೆ ಸೇರಿ ಬೇರೆ ಕಡೆಯಿಂದ ಹೆಣ್ಣುಮಕ್ಕಳನ್ನು ಕರೆತಂದು ದಂಧೆ ನಡೆಸುತ್ತಿದ್ದು, ಈ ನಾಲ್ವರನ್ನೂ ಬಂಧಿಸಲಾಗಿದೆ. ಈ ಕುರಿತು ಮಾಹಿತಿ ಆಧಾರಿಸಿ ಇನ್ಸ್ಪೆಕ್ಟರ್ ಬೈರ ಮತ್ತು ಸಿಬ್ಬಂದಿ ರಮೇಶ್, ಮುನಿರಾಜು, ದೇವರಾಜು, ಹನುಮಂತಗೌಡ, ಹಡಪದ್, ಸುಭಾಷ್, ಕಾರ್ತೀಕ್, ಲಾವಣ್ಯಾ, ಪವಿತ್ರಾ, ನಂದಿನಿ ಅವರಿದ್ದ ತಂಡ ಶನಿವಾರ ಸಂಜೆ ದಾಳಿ ನಡೆಸಿದ್ದಾರೆ.

ಬಂಧಿತರಿಂದ ಒಂದು ಆಟೋ, ೭೭೦೦ರೂ. ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಂಡು ಅನೈತಿಕ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು

ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net