ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರೊಸ್ಟೊಡಾಂಟಿಕ್ಸ್ ದಿನಾಚರಣೆ

14
Published on

ಮೈಸೂರು: ಜೆಎಸ್‌ಎಸ್ ದಂತ ಕಾಲೇಜು ಮತ್ತು ಆಸ್ಪತ್ರೆ ಮತ್ತು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಪ್ರೊಸ್ಟೊಡಾಂಟಿಕ್ಸ್ ವಿಭಾಗದಿಂದ ಇತ್ತೀಚೆಗೆ ಪ್ರೊಸ್ಟೊಡಾಂಟಿಕ್ಸ್ ದಿನವನ್ನು ಆಚರಿಸಲಾಯಿತು.

ಕೃತಕ ದಂತಪಂಕ್ತಿ ಧರಿಸುವ ವೃದ್ಧರು ಸಮತೋಲಿತ ಆಹಾರ ಸೇವಿಸುವ ಬಗ್ಗೆ ಮಾಹಿತಿಯುಳ್ಳ ಕರಪತ್ರವನ್ನು ಮುಖ್ಯ ಅತಿಥಿಯಾಗಿದ್ದ ಪರೀಕ್ಷಾ ನಿಯಂತ್ರಕ ಡಾ.ಸುಧೀಂದ್ರ ಭಟ್ ಬಿಡುಗಡೆ ಮಾಡಿದರು.

ವಿಭಾಗದ ಉಪನ್ಯಾಸಕಿ ಡಾ.ಎಸ್.ಮೀನಾಕ್ಷಿ ಮಾತನಾಡಿ, ಬಾಯಿಯ ಆರೋಗ್ಯಕ್ಕೆ ಪೌಷ್ಟಿಕಾಂಶ ಆಹಾರ ತುಂಬ ಮಹತ್ವದ್ದಾಗಿದೆ. ಹಾಗಾಗಿ ಬಾಯಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು.

ಸಮುದಾಯ ಸಂಪರ್ಕ ಸೇವೆಯ ಭಾಗವಾಗಿ ನಗರದ ಸೇವಾಯಾನ ವೃದ್ಧಾಶ್ರಮದಲ್ಲಿ ದಂತ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಜೆಎಸ್‌ಎಸ್ ದಂತ ಕಾಲೇಜು ಮತ್ತು ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ದಂತ ನೈರ್ಮಲ್ಯ ನಿರ್ವಹಣೆಗಾಗಿ ದಂತ ನೈರ್ಮಲ್ಯ ಕಿಟ್‌ಗಳನ್ನು ಸಹ ವಿತರಿಸಲಾಯಿತು.

ವೈದ್ಯ ಡಾ.ಬಿ.ಎಸ್.ಸುನೀಲ್, ಮಧುಮೇಹ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ದಂತಪಂಕ್ತಿಯ ಪ್ರಭಾವದ ಕುರಿತು ಮಾಹಿತಿ ನೀಡಿದರು. ಡಾ.ಅನುಪಮಾ ಆರಾಧ್ಯ ಅವರು ದಂತ ನೈರ್ಮಲ್ಯದ ಮಹತ್ವ ತಿಳಿಸಿಕೊಟ್ಟರು.

ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಸ್ವಾಮಿ, ಪ್ರಾಂಶುಪಾಲೆ ಡಾ.ಎಂ.ಆರ್.ದಾಕ್ಷಾಯಿಣಿ, ಪೌಷ್ಟಿಕತಜ್ಞೆ ಡಾ.ಟೋಕ್ಪಮ್ ರೇಷ್ಮಾ, ಡಾ.ಎಸ್.ಸೌಮ್ಯಾ, ಡಾ. ಸಿ.ಪಿ.ಕಾತ್ಯಾಯಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net