ಸಾಧಕರ ಆದರ್ಶ ಅಳವಡಿಸಿಕೊಳ್ಳಲಿ

20Rayabag4
ರಾಯಬಾಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಸ್.ಮುಧೋಳೆ, ಡಾ. ಆರ್.ಕೆ. ಪಾಟೀಲ, ಡಿ.ಎಲ್. ಮಿರ್ಜಿ ಇತರರಿದ್ದರು.
Published on

ರಾಯಬಾಗ: ಸಾಧಕರ ಜೀವನ ವೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಬಾವನಸೌಂದತ್ತಿ ಶಿವಶಕ್ತಿ ಶುಗರ್ಸ್ ಲಿಮಿಟೆಡ್ ಎಚ್‌ಆರ್ ಮ್ಯಾನೇಜರ್ ಬಿ.ಎಸ್.ಮುಧೋಳೆ ಹೇಳಿದರು. ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಡಾ. ಆರ್.ಕೆ. ಪಾಟೀಲ, ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಥಾನಿಕ ಮಂಡಳಿ ಸದಸ್ಯರಾದ ಡಿ.ಎಲ್. ಮಿರ್ಜಿ, ವಿ.ಪಿ. ಪಾಟೀಲ, ಎಂ.ಎಂ. ನಿಶಾನ್ದಾರ್, ಎಲ್.ಬಿ.ಪಾಟೀಲ, ಬಿಸಿಎ ಸಂಯೋಜಕ ಎಸ್.ಎಸ್. ಹುಲಿಕೊಪ್ಪೆ, ಎಂ.ಎಸ್.ಹಂಜೆ, ತೃಪ್ತಿ ದೇಶಪಾಂಡೆ, ಸುಶ್ಮಿತಾ ಕುಂಬಾರ, ಶ್ರೇಯಾ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net