ಸಿಎ ಅಧ್ಯಯನದಿಂದ ಭವಿಷ್ಯ ಸುಂದರ

h1-ca
Published on

ಹುಬ್ಬಳ್ಳಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆ ವತಿಯಿಂದ ಧಾರವಾಡದ ಹೆಬ್ಬಳಕ್ಷಿಯ ವಿದ್ಯಾರಣ್ಯ ಕಂಪೋಸಿಟ್ ಕಾಲೇಜ್‌ನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ ಬಗೆಗೆ ಬುಧವಾರ ವಿಚಾರ ಸಂಕಿರಣ ಏರ್ಪಡಿಸಲಾಯಿತು.
ಶಾಖೆ ಅಧ್ಯಕ್ಷ ಧನಪಾಲ್ ಮುನ್ನೊಳ್ಳಿ ಮಾತನಾಡಿ, ಸಿಎ ಫೌಂಡೇಷನ್ ಮೂಲಕ ಸಿಎ ಕೋರ್ಸ್ ಅನ್ನು ಈಗಿನ ವಿದ್ಯಾರ್ಥಿಗಳು ಮೂರರಿಂದ ನಾಲ್ಕು ವರ್ಷದಲ್ಲಿ ತೇರ್ಗಡೆಯಾಗಬಹುದು. ಚಿಕ್ಕ ವಯಸ್ಸಿನಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಬಹುದು. ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವುದರಿಂದ ಸಿಎ ಪಾಸಾದವರಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ ಎಂದರು. 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಾಚಾರ್ಯೆ ಎಸ್.ಕೆ. ಗೊರೆಬಾಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸೋಮಶೇಖರ, ವಾಣಿಶ್ರೀ ಮಠದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net