

ಸಿರಗುಪ್ಪ: ಸಾಧಕರನ್ನು ಗೌರವಿಸುವುದರಿಂದ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದಂತಾಗಲಿದೆ ಎಂದು ಬ್ರಾಹ್ಮಣ ಸಂಘದ ಪ್ರಮುಖ ಬಲಕುಂದಿ ಹನುಮಂತಚಾರ್ ಹೇಳಿದರು.
ನಗರದ ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣ ಸಂಘ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ. ವಿದ್ವಾನ್ ಲಲಿತಾನಂದನಾಥ ಅವರು ಮಾತನಾಡಿ, ವಿದ್ಯೆಗಳಲ್ಲಿಯೇ ಶ್ರೇಷ್ಠವಾದ ವೇದಾಧ್ಯಯನವಾಗಿದೆ. ಆದ್ದರಿಂದ ಬ್ರಾಹ್ಮನ ಸಮಾಜದವರು ಮಕ್ಕಳಿಗೆ ಮೊದಲು ವೇದ ಅಧ್ಯಾಯನ ಕಲಿಸಿ. ಕೇವಲ ಲೌಕಿಕ ವಿದ್ಯೆಗಳಿಗೆ ಒತ್ತು ನೀಡಬಾರದು ಎಂದರು.
ಜೋತಿಷ್ಯ ಮತ್ತು ಸಮಾಜ ಸೇವೆಯಲ್ಲಿ ಗೌರವ ಡಾಕ್ಟರೇಟ್ ಪಡೆದ ಜೆ.ಶ್ರೀನಿವಾಸಮೂರ್ತಿ, ವೇದಾಧ್ಯಯನ ಮತ್ತು ಧಾರ್ಮಿಕ ಕ್ಷೇತ್ರದ ಸಾಧನೆಗೈದ ಆಶೀರ್ವಾದ್ ಐರಣಿ, ಸಮಾಜ ಸೇವೆಗಾಗಿ ಶ್ರೀನಿವಾಸ್ ಆಚಾರ್, ರಾಜಕೀಯ ಕ್ಷೇತ್ರದ ಸಾಧನೆಗಾಗಿ ಕೊಪ್ರೇಶ್ ಆಚಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ರಾಹ್ಮಣ ಸಂಘದ ತಾಲೂಕು ಅಧ್ಯಕ್ಷ ಎಚ್.ಕೆ.ಗೋಪಾಲರಾವ್, ಮುಖಂಡರಾದ ಕೆ.ಎಚ್ ನಾರಾಯಣ ರಾವ್, ಎಂ.ವಾಸುದೇವರಾವ್, ಜೆ.ರಾಮಮೂರ್ತಿ, ದ್ವಾರಕಾಬಾಯಿ ಇನ್ನಿತರರಿದ್ದರು.