

ಅಥಣಿ ಗ್ರಾಮೀಣ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 60:40 ಅನುದಾನದೊಂದಿಗೆ ಅಥಣಿ ೇತ್ರದ 2.25 ಲ ಎಕರೆ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿಸಲು ಬೋರ್ವೆಲ್ ಕೊರೆಯಿಸಿ ನೀರು ಸಂಗ್ರಹಿಸುವ ಯೋಜನೆ ಸಿದಟಛಿಪಡಿಸಲಾಗಿದೆ. ಯೋಜನೆ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸೋಮವಾರ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಜಾಕ್ವೆಲ್ ಕಂ ಪಂಪ್ಹೌಸ್ ಕಾಮಗಾರಿಯ ರ್ಯಾಪ್ಟ್ ಕಾಂಕ್ರೀಟನ್ ಪೂಜಾ ಕಾರ್ಯಕ್ರಮ ನೆರವೇರಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷ ಕೊಕಟನೂರಲ್ಲಿ ಪಶುವೆದ್ಯಕಿಯ ಮಹಾವಿದ್ಯಾಲಯ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಆಗಮಿಸಿದ್ದಾಗ 1,486 ಕೋಟಿ ರೂ. ವೆಚ್ಚದ ಕೊಟ್ಟಲಗಿ ಅಮ್ಮಾಜೇಶ್ವರಿ ಯೋಜನೆ, 450 ಕೋಟಿ ರೂ. ವೆಚ್ಚದ ಕಷಿ ಮಹಾವಿದ್ಯಾಲಯ ಹಾಗೂ ಕಷ್ಣಾನದಿ ದಡದ ಕೃಷಿ ಭೂಮಿಯ ಸವಳು&ಜವಳು ಹೋಗಲಾಡಿಸುವ ಯೋಜನೆಗೆ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದ್ದೆ. ಮೊದಲೆರಡು ಯೋಜನೆಗಳಿಗೆ ಅನುದಾನ ಸಿಕ್ಕಿದೆ. ಜತೆಗೆ ಸವಳು&ಜವಳು ಸಮಸ್ಯೆ ನಿವಾರಣೆಗಾಗಿ ಶ್ರೀ ಅನುದಾನ ತರಲು ಪ್ರಯತ್ನಿಸುವೆ ಎಂದರು.
ವಿದ್ಯುತ್ ಟಕ ಸ್ಥಾಪನೆಗೆ ಪ್ರಸ್ತಾವನೆ: ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ನಾನು ಅಭಿವದಿಟಛಿಯತ್ತ ಗಮನಹರಿಸುತ್ತೇನೆ. ಯಲಿಹಡಲಗಿ, ತೆಲಸಂಗ, ಸವದಿ, ಸಂಕೋನಟ್ಟಿಯಲ್ಲಿ 110 ಕೆವಿ ಸಾಮರ್ಥ್ಯದ ವಿದ್ಯುತ್ ಟಕ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಥಣಿಯ 110 ಕೆವಿ ಟಕವನ್ನು 440 ಕೆವಿ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಎಂದರು. ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯ ಅಮೋ ಖೋಬ್ರಿ ಮಾತನಾಡಿ, ಕೊಟ್ಟಲಗಿ ಅಮ್ಮಾಜೇಶ್ವರಿ ಯೋಜನೆ ನನಸಾಗಿಸುವಲ್ಲಿ ಶಾಸಕ ಲಕ್ಷ$್ಮಣ ಸವದಿ ಶ್ರಮ ಅಪಾರ ಎಂದರು.
ಮುಖಂಡ ಶೇಖರ ನೇಮಗೌಡ, ಜಿಪಂ ಮಾಜಿ ಸದಸ್ಯ ಸಿದರಾಯ ಯಲಡಗಿ ಮಾತನಾಡಿದರು. ಇದೇ ವೇಳೆ ಯೋಜನೆ ಪಂಪ್ಹೌಸ್ ನಿರ್ಮಾಣಕ್ಕಾಗಿ ಭೂಮಿ ನೀಡಿದ 36 ಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಕೆಎಂಎ್ ನಿರ್ದೇಶಕ ಮಹಾದೇವ ಬಿಳಿಕುರಿ, ಮುಖಂಡರಾದ ಚಿದಾನಂದ ಸವದಿ, ಸಚಿನ ಬುಟಾಳಿ, ಎಸ್.ಸಿ. ನಾಗರಾಜ, ಪ್ರವಿಣ ಹುಣಸಿಕಟ್ಟಿ, ಸಂಗಯ್ಯ ಪೂಜಾರಿ, ಟಿವಾಳಪ್ಪ ಗುಡ್ಡಾಪುರ, ಕುಮಾರ ನೇಮಗೌಡ, ನೂರ್ ಅಹಮ್ಮ-ದ್ ಡೊಂಗರಗಾಂವ, ರವೀಂದ್ರ ಮುರಗಾಲಿ, ಪನ್ನೇಕರ ಎ., ಶೀತಲಗೌಡ ಪಾಟೀಲ, ಸಂಗಮೇಶ ಹಚಡದ, ಶ್ರೀಶೆಲ ಶೆಲ್ಲೆಪ್ಪಗೋಳ ಇತರರಿದ್ದರು.