

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಶ್ಯಾನುಭೋಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಮಂಗಳವಾರ ನಡೆಯಿತು.
ಮೈಮುಲ್ ನಿರ್ದೇಶಕ ಬಿ.ಎ.ಪ್ರಕಾಶ್ ಮಾತನಾಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟವು ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈಗಾಗಲೇ ನಮ್ಮ ಸಂಘದಿಂದ ರೈತರಿಗೆ ಪ್ರತಿ ಲೀಟರ್‌ಗೆ 50.ರೂ ಕೊಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರವು ಈ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ರೈತರಿಗೆ ಹೊಸ ದರ ಸಿಗುವ ಭರವಸೆ ಇದೆ. ಒಕ್ಕೂಟದಿಂದ ಸಿಗುವಂತಹ ಪ್ರತಿಯೊಂದು ಸೌಲಭ್ಯವನ್ನೂ ಎಲ್ಲರೂ ಸದುಪಯೋಗ ಮಾಡಿಕೊಳ್ಳಿರಿ ಎಂದರು.
ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್ ಮಾತನಾಡಿ, ಶ್ಯಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಈ ಬಾರಿ ವಾರ್ಷಿಕ 6,95,826 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರು ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಹೆಚ್ಚಿನ ಲಾಭಗಳಿಸಿರಿ ಎಂದರು.
ಸಭೆಯಲ್ಲಿ ಸಂಘದ ಸದಸ್ಯರು ಆಡಿಟ್ ವರದಿ ಸೇರಿದಂತೆ ಹಲವು ವಿಚಾರಗಳ ಕುರಿತು ಗಂಭೀರ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.
ಮೈಮುಲ್ ಉಪ ವ್ಯವಸ್ಥಾಪಕ ಡಾ.ಸತೀಶ್, ವಿಸ್ತರಣಾಧಿಕಾರಿ ಸತೀಶ್, ಸಂಘದ ಅಧ್ಯಕ್ಷ ಬಸವರಾಜಪ್ಪ, ಉಪಾಧ್ಯಕ್ಷ ಎಸ್.ಸಿ ರಾಮಚಂದ್ರ, ನಿರ್ದೇಶಕರಾದ ಎಸ್.ಪಿ.ರಮೇಶ, ಎಸ್.ಎಸ್.ನಟೇಶ, ಎಸ್.ಎಂ.ಗಣೇಶ, ಎಸ್.ಟಿ.ರಾಜು, ಮೂರ್ತಿ, ಎಸ್.ಆರ್. ಪ್ರಕಾಶ, ಎಸ್.ಜಿ. ಗಣೇಶ, ಸವಿತಾ, ಮಂಗಳಾ, ಎಸ್.ಎಸ್. ದಿನೇಶ, ಸಿಇಒ ಎಸ್.ಕೆ. ನಾಗೇಶ, ಸಿಬ್ಬಂದಿ ಎಸ್.ಬಿ ವೆಂಕಟೇಶ್, ಎಸ್.ಜಿ.ಲಿಂಗರಾಜು, ಎಸ್.ಎನ್. ವಸಂತಕುಮಾರ್ ಸೇರಿದಂತೆ ಸದಸ್ಯರು ಇದ್ದರು.