

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಟಿಸಲು ಗಾಂಧಿ ಭಾರತ್ ಸವಾವೇಶದಲ್ಲಿ ನಿರ್ಧರಿಸಲಾಗಿದೆ. ಅದಕ್ಕೆ ಪೂರಕವಾಗಿ ಬೆಳಪುವಿನಲ್ಲಿ ನಿರ್ವಾಣಗೊಳ್ಳುತ್ತಿರುವ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಗಾಂಧಿ ಸಂಶೋಧನಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುವಾರ್ ಸೊರಕೆ ಹೇಳಿದರು.
ಕಾಪು ರಾಜೀವ ಭವನದಲ್ಲಿ ಶನಿವಾರ ನಡೆದ ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ದಕ್ಷಿಣ ಮತ್ತು ಉತ್ತರ ಸಮಿತಿಯ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಪ್ರದಾನ ಸವಾರಂಭದಲ್ಲಿ ಅಧಿಕಾರ ಹಸ್ತಾಂತರಿಸಿ ವಾತನಾಡಿದರು.
ಕಾಪು ಕ್ಷೇತ್ರದಲ್ಲಿ ಯುವಕ ಕಾಂಗ್ರೆಸನ್ನುವಿಶೇಷವಾಗಿ ಸಂಟಿಸುವ ಮೂಲಕ ಯುವಕರನ್ನು ಸೆಳೆಯುವ ಕೆಲಸ ನಡೆಯುತ್ತಿದೆ. ಹೆಚ್ಚು ಹೆಚ್ಚು ಯುವಕರ ಸೇರ್ಪಡೆಯಾಗುವ ಮೂಲಕವಾಗಿ ಕಾಂಗ್ರೆಸನ್ನು ಸಂಟನಾತ್ಮಕವಾಗಿ ಮತ್ತಷ್ಟು ಸದೃಢಗೊಳಿಸಲು ಸಾಧ್ಯವಿದೆ. ದೇಶದ ಸಂವಿಧಾನ, ಸಿದ್ಧಾಂತಕ್ಕೆ ಧಕ್ಕೆಯಾದಲ್ಲಿ ಅದನ್ನು ಎದುರಿಸಲು ಯುವಪಡೆ ಸಿದ್ಧವಾಗಬೇಕಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಮೂಲ್ಕಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುವಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಸಮಿತಿ ಅಧ್ಯಕ್ಷ ವೈ. ಸುಕುವಾರ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ವಾತನಾಡಿದರು.
ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ನಿಯಾಜ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ದಕ್ಷಿಣ ಸಮಿತಿ ಅಧ್ಯಕ್ಷ ಗೌರೀಶ್ ಕೋಟ್ಯಾನ್, ಉತ್ತರ ಸಮಿತಿ ಅಧ್ಯಕ್ಷ ಶರತ್ ನಾಯ್ಕ ಮತ್ತು ಅವರ ತಂಡಕ್ಕೆ ನಿರ್ಗಮನ ಪದಾಧಿಕಾರಿಗಳು ಅಧಿಕಾರ ಹಸ್ತಾಂತರಿಸಿದರು.
ಸಂತೋಷ್ ಕುಲಾಲ್, ದೀಪಕ್ ಕೋಟ್ಯಾನ್, ಕಷ್ಣ ಶೆಟ್ಟಿ ಬಜಗೋಳಿ, ಅರ್ಜುನ್ ನಾಯರಿ, ರಮೀಜ್ ಹುಸೇನ್, ಪ್ರಶಾಂತ್ ಜತ್ತನ್ನ, ಪಕ್ಷದ ಪ್ರಮುಖರಾದ ಕಾಪು ದಿವಾಕರ ಶೆಟ್ಟಿ, ಶರ್ಪುದ್ದೀನ್ ಶೇಖ್, ನವೀನ್‌ಚಂದ್ರ ಸುವರ್ಣ, ನವೀನ್‌ಚಂದ್ರ ಜೆ.ಶೆಟ್ಟಿ, ಹಸನಬ್ಬ ಶೇಕ್, ನವೀನ್ ಎನ್.ಶೆಟ್ಟಿ, ಹರೀಶ್ ಕಿಣಿ, ಶಾಂತಲತಾ ಶೆಟ್ಟಿ, ವಿಶ್ವಾಸ್ ಅಮೀನ್, ಅಬ್ದುಲ್ ಅಜೀಜ್ ಹೆಜವಾಡಿ ಉಪಸ್ಥಿತರಿದ್ದರು. ಮಹಮ್ಮದ್ ನಿಯಾಜ್ ಸ್ವಾಗತಿಸಿದರು. ಗೌರೀಶ್ ಕೋಟ್ಯಾನ್ ವಂದಿಸಿದರು. ಮಹಮ್ಮದ್ ಬಿಲಾಲ್ ಕಾರ್ಯಕ್ರಮ ನಿರೂಪಿಸಿದರು.