

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬೆಳಪು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೂಲಸೌಕರ್ಯಗಳ ಜೋಡಣೆ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಪತ್ರ ನೀಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಪು ಬೆಳಪು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹೆಚ್ಚುವರಿ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪಾಲಿಟೆಕ್ನಿಕ್ ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎರಡು ಹೊಸ ಕೋರ್ಸ್‌ಗಳ ಆರಂಭಿಸುವಂತೆ ಮತ್ತು ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಹಾಸ್ಟೆಲ್ ಒದಗಿಸಲು ಉನ್ನತ ಶಿಕ್ಷಣ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಥಮ ಹಂತದಲ್ಲಿ ಹೆಚ್ಚುವರಿ ಕೋರ್ಸ್, ಬಳಿಕ ಹಾಸ್ಟೆಲ್ ಬಗ್ಗೆ ಗಮನ ಹರಿಸುವ ಭರವಸೆ ದೊರಕಿದೆ. ಅದರ ಜತೆಗೆ ಸಚಿವ ಜಮೀರ್ ಅಹಮದ್ ಅವರು ಮೌಲಾನಾ ಆಜಾದ್ ಶಾಲೆಗೆ ಸರ್ಕಾರ 5.50 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಶಾಸಕರ ಶಿಫಾರಸಿನ ಮೇರೆಗೆ ಅಲ್ಪಸಂಖ್ಯಾತ ನಿಧಿಯಡಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ಬಿಡುಗಡೆ ಭರವಸೆ ದೊರಕಿದೆ ಎಂದು ಮಾಹಿತಿ ನೀಡಿದರು.
ಕಾಪು ತಹಸೀಲ್ದಾರ್ ಪ್ರತಿಭಾ ಆರ್, ಕರ್ನಾಟಕ ಗೃಹಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತೆ ಸಹನಾ ಎಂ, ಸಹಾಯಕ ಅಭಿಯಂತ ಹರೀಶ್ ಕುಮಾರ್, ಗ್ರಾಪಂ ಸದಸ್ಯರಾದ ಶರತ್ ಕುಮಾರ್, ಸುಲೇಮಾನ್, ಉದ್ಯಮಿಗಳಾದ ಮುಷ್ತಾಕ್ ಅಹಮದ್, ಶಹನವಾಜ್ ಫಜಲುದ್ದೀನ್, ಮೈಸೂರು ನೇಸರ ಎಂಟರ್ ಪ್ರೈಸಸ್ ಪ್ರತಿನಿಧಿ ಪುನೀತ್ ಶೆಟ್ಟಿ, ಪ್ರಾಂಶುಪಾಲ ಮನೋಹರಾಚಾರಿ ಪಿ.ಎಸ್, ಬೆಳಪು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ಆಶಾಲತಾ ಉಪಸ್ಥಿತರಿದ್ದರು.
ಬೆಳಪು ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ಮಂಗಳೂರು ವಿವಿ ಸಂಯೋಜಿತ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿದೆ. ಶೈಕ್ಷಣಿಕ ಅಭಿವೃದ್ಧಿ ಜತೆಗೆ ಗ್ರಾಮಾಭಿವೃದ್ಧಿಗೆ ಪೂರಕವಾಗಿ ಸಹಕಾರಿಸಲು ಬದ್ಧನಿದ್ದೇನೆ. ಗುರ್ಮೆ ಸುರೇಶ್ ಶೆಟ್ಟಿ, ಶಾಸಕ https://www.vijayavani.net/incorporating-human-values-with-culture https://www.vijayavani.net/navodaya-sangh-is-a-model-for-the-country