

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸೌಪರ್ಣಿಕಾ ನದಿಗೆ ಅಡ್ಡಲಾಗಿ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ-66 ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿರುವ ಹಳೇ ಸೇತುವೆ ಮೇಲೆ ಸಂಚಾರ ಸ್ಥಗಿತಗೊಂಡು ಮೂರು ತಿಂಗಳು ಕಳೆದಿದ್ದು, ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಹೆದ್ದಾರಿ ಪ್ರಾಧಿಕಾರ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.
ಕಾರವಾರ ವಿಭಾಗೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಟ್ಟ ಸೇತುವೆ ಕುರಿತು ಇತ್ತೀಚಿಗೆ ಹೆದ್ದಾರಿ ಯೋಜನಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಹೊಸ ಸೇತುವೆಗೆ ನೀಲಿನಕಾಶೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಚೆನ್ನೈನ ಎಂಎಸ್ ಅಸ್ಸಿಸ್ಟೆಮ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ತಜ್ಞರ ವರದಿ ಮೇರೆಗೆ ಹಳೇ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ಹೆದ್ದಾರಿ ಪ್ರಾಧಿಕಾರ ಕ್ರಮ ತೆಗೆದುಕೊಂಡಿತ್ತು. ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರ ಮುಂದುವರಿದಿದೆ.
ಜರ್ಮನ್ ಮೂಲದ ಗ್ಯಾಮನ್ ಇಂಡಿಯಾ ಸಂಸ್ಥೆ ನೇತೃತ್ವದಲ್ಲಿ 1966-67ರಲ್ಲಿ ಹಳೇ ಸೇತುವೆ ನಿರ್ಮಿಸಿತ್ತು. ಇದು 615 ಮೀ. ಉದ್ದವಿದ್ದು, ಉಡುಪಿ ಜಿಲ್ಲೆಯ ಅತಿ ಉದ್ದದ ಸೇತುವೆ ಇದಾಗಿದೆ. 2023ರ ಮಳೆಗಾಲದಲ್ಲಿ ರಾ.ಹೆ. 66ರ ಕಾರವಾರದ ಕಾಳಿ ನದಿಗೆ ನಿರ್ಮಿಸಲಾಗಿದ್ದ ಹಳೇ ಸೇತುವೆ ಕುಸಿದು ಬಿದ್ದು ಸಂಪರ್ಕವೇ ಕಡಿತಗೊಂಡಿತ್ತು. ಹೀಗಾಗಿ ಹಳೇ ಸೇತುವೆಯ ಧಾರಣ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದುದರಿಂದ ಎರಡು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕುಂದಾಪುರ - ಬೈಂದೂರು ಹೆದ್ದಾರಿಯ ಎಲ್ಲ ಸೇತುವೆಗಳ ಧಾರಣಾ ಸಾಮರ್ಥ್ಯ ತಪಾಸಣೆ ಮಾಡಲಾಗಿತ್ತು.
ಅರಾಟೆ ಹಳೇ ಸೇತುವೆ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರೆ. ಹಳೇ ಸೇತುವೆ ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ -ಯೋಗೀಶ ಇಂಜಿನಿಯರ್ ಐಆರ್‌ಬಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಗೋವಾ, ಮಹಾರಾಷ್ಟ್ರ ಸಂಪರ್ಕಿಸುವ ರಾ.ಹೆ.66ರಲ್ಲಿ ಪ್ರತಿನಿತ್ಯ ಸರಕು ಸಾಗಾಟದ ವಾಹನಗಳು, ಬಸ್ಸುಗಳು, ಭಾರಿ ಮತ್ತು ಲಘು ವಾಹನಗಳು ನಿರಂತರ ಸಂಚರಿಸುತ್ತಿದ್ದು, ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಒತ್ತಡ ಸೃಷ್ಟಿಯಾಗಿದೆ. ಶೀಘ್ರವೇ ಹಳೇ ಸೇತುವೆ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸರ್ಕಾರ ಮುಂದಾಗಬೇಕು -ರಾಘವೇಂದ್ರ ಸ್ಥಳೀಯ ನಿವಾಸಿ https://www.vijayavani.net/kadoor-temple-brahma-kalashotsava https://www.vijayavani.net/protecting-culture-through-literary-activity