

ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಂಟ್ವಾಳ ತಾಲೂಕಿಗೆ ಸುಸಜ್ಜಿತ ವ್ಯವಸ್ಥೆಗಳಿರುವ ಕ್ರೀಡಾಂಗಣ ನಿರ್ಮಾಣಗೊಳ್ಳಬೇಕೆಂಬುದು ಕ್ರೀಡಾಪಟುಗಳು ಹಾಗೂ ಊರಿನವರ ಬಹಳ ವರ್ಷದ ಕನಸಾಗಿದ್ದು, ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಮರುಜೀವ ದೊರೆಯುವ ಲಕ್ಷಣ ಕಂಡುಬಂದಿದೆ.
ಬೆಂಜನಪದವಿನಲ್ಲಿ ಗುರುತಿಸಿರುವ ಜಮೀನಿನಲ್ಲಿ ತಾಲೂಕು ಕ್ರೀಡಾಂಗಣಕ್ಕೆ ಈ ಹಿಂದೆ ಮೀಸಲಿಟ್ಟಿದ್ದ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಕ್ರೀಡಾ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತಾಲೂಕಿನ ಕ್ರೀಡಾಪಟುಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಪ್ರತೀ ತಾಲೂಕಿಗೂ ಸುಸಜ್ಜಿತ ಕ್ರೀಡಾಂಗಣ ಇದ್ದು, ಆದರೆ ಬಂಟ್ವಾಳಕ್ಕೆ ಮಾತ್ರ ತಾಲೂಕುಮಟ್ಟದ ಕ್ರೀಡಾಂಗಣದ ಕೊರತೆ ಇತ್ತು. ಈ ನಿಟ್ಟಿನಲ್ಲಿ ಆಗಿನ ಜಿಲ್ಲಾ ಉಸ್ತುವಾರ ಸಚಿವ ಬಿ.ರಮಾನಾಥ ರೈ ಅವರ ಕಾಲದಲ್ಲಿ ಬೆಂಜನಪದವು ಶಾಲೆಯ ಬಳಿ ಜಮೀನು ಗುರುತಿಸಿದ್ದು, 10 ಕೋಟಿ ರೂ. ಅನುದಾನ ಮಂಜೂರಾಗುವುದರ ಜತೆಗೆ ಗುದ್ದಲಿಪೂಜೆಯೂ ನೆರವೇರಿತ್ತು. ಸರ್ಕಾರ ಬದಲಾಗಿದ್ದರಿಂದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಯೋಜನೆಯೂ ನನೆಗುದಿಗೆ ಸರಿದಿತ್ತು.
ಕ್ರೀಡಾ ಇಲಾಖೆಗೆ ಪತ್ರ: ಬೆಂಜನಪದವು ಬಳಿಯ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರಾಗಿರುವ ಮೊತ್ತ ಬಿಡುಗಡೆಗೊಳಿಸಲು ಎಂಎಲ್ಸಿ ಮಂಜುನಾಥ ಭಂಡಾರಿ ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದು, ಮೈದಾನ ನಿರ್ಮಾಣ ಶೀಘ್ರವೇ ನಡೆದಲ್ಲಿ ಆಟಗಾರರ ತರಬೇತಿಗೆ ಅನುಕೂಲವಾಗಲಿದೆ. ಕಾಮಗಾರಿ ತಕ್ಷಣವೇ ಆರಂಭಗೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಖೇಲೋ ಇಂಡಿಯಾ ಯೋಜನೆಗೆ ಪ್ರಸ್ತಾವನೆ
ಬಂಟ್ವಾಳ ತಾಲೂಕಿನಲ್ಲಿ ಸೂಕ್ತ ಕ್ರೀಡಾಂಗಣ ಇಲ್ಲದಿರುವುದರಿಂದ ಇಲ್ಲಿನ ತಾಲೂಕುಮಟ್ಟದ ಕ್ರೀಡಾಕೂಟ ಆಯೋಜಿಸಲು ಮಂಗಳೂರು, ಮೂಡುಬಿದಿರೆಯ ಮೈದಾನಗಳನ್ನು ಅವಲಂಬಿಸಲಾಗುತ್ತಿತ್ತು. ದೂರದ ಊರಿಗೆ ಸಂಚರಿಸಿ ಕ್ರೀಡೆಯಲ್ಲಿ ಭಾಗವಹಿಸುವುದು ಆಟಗಾರರಿಗೂ ತ್ರಾಸದಾಯಕವಾಗಿತ್ತು. ಹಿಂದೊಮ್ಮೆ ಎಸ್‌ವಿಎಸ್ ಮೈದಾನದಲ್ಲಿ ನಿಗದಿಪಡಿಸಲಾಗಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಕಾರಣಾಂತರಗಳಿಂದ ಮೂಡುಬಿದಿರೆಗೆ ಸ್ಥಳಾಂತರಿಸಲಾಗಿತ್ತು. ಈ ನಡುವೆ ತಾಲೂಕಿನಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅವಶ್ಯಕತೆ ಮನಗಂಡಿದ್ದ ಶಾಸಕ ರಾಜೇಶ್ ನಾಕ್ ಅವರು ಕೇಂದ್ರದ ಖೇಲೋ ಇಂಡಿಯಾ ಯೋಜನೆಯಡಿ 100 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸುವಂತೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದರು.
ಬೆಂಜನಪದವಿನಲ್ಲಿ ಕ್ರೀಡಾಂಗಣ ನಿರ್ಮಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈ ಹಿಂದೆ 10 ಕೋಟಿ ರೂಪಾಯಿ ಅನುದಾನ ಮಂಜೂರು ಡಲಾಗಿದು,್ದ ಆರ್ಥಿಕ ಇಲಾಖೆಯಿಂದ ಕೂಡಲೇ ಬಿಡುಗಡೆ ಮಾಡಿದಲ್ಲಿ ಆಟದ ಮೈದಾನದ ಅಭಿವದ್ಧಿ ಕಾಮಗಾರಿಗಳನ್ನು ತಕ್ಷಣ ಆರಂಭಿಸಬಹುದು. ಮಂಜುನಾಥ ಭಂಡಾರಿ ವಿಧಾನಪರಿಷತ್ ಸದಸ್ಯ