ಆಸ್ತಿಗಳ ಸುರಕ್ಷತೆಗೆ ಇ-ಖಾತಾ ಮಾಡಿಸಿ

1mnv01
ಮಾನ್ವಿಯ ಪುರಸಭೆಯಲ್ಲಿ ನಿವೇಶನ ಮಾಲೀಕರಿಗೆ ಆಸ್ತಿ ನೋಂದಣಿ ದಾಖಲೆಯನ್ನು ಶಾಸಕ ಹಂಪಯ್ಯ ನಾಯಕ ವಿತರಿಸಿದರು. ಪುರಸಭೆ ಸಿಒ ಪರಶುರಾಮ ದೇವಮಾನೆ, ಅಧ್ಯಕ್ಷೆ ಲಕ್ಷ್ಮೀ ಡಿ.ವೀರೇಶ ಇದ್ದರು.
Published on

ಮಾನ್ವಿ: ರಾಜ್ಯ ಸರ್ಕಾರ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ, ನಿವೇಶನಗಳನ್ನು ಹೊಂದಿರುವ ಮಾಲೀಕರು ಕೂಡಲೇ ಆಸ್ತಿಗಳ ಸುರಕ್ಷತೆಗೆ ಇ-ಖಾತಾಗಳನ್ನು ಮಾಡಿಸಿಕೊಳ್ಳಬೇಕು ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.

ಪಟ್ಟಣದ ಪುರಸಭೆಯಲ್ಲಿ ಶನಿವಾರ ಇ-ಖಾತಾ ಅರ್ಜಿ ಸಲ್ಲಿಸಿದ ಮಾಲೀಕರಿಗೆ ಫಾಮ್-3ಎ ನೀಡಿ ಮಾತನಾಡಿದರು. ಪುರಸಭೆ ವ್ಯಾಪ್ತಿಯೊಳಗೆ ಬರುವ ಕಟ್ಟಡ ನಿವೇಶನಗಳಿಗೆ ಆಸ್ತಿ ತೆರಿಗೆ ಸುಧಾರಣೆಗೊಳಿಸಲು 2024-25ನೇ ಸಾಲಿನಲ್ಲಿ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು ಆಸ್ತಿ ಮಾಲೀಕರಿಂದ ಅವಶ್ಯ ದಾಖಲೆಗಳನ್ನು ಪಡೆದು ಪುರಸಭೆ ನಿಯಮಗಳ ಪ್ರಕಾರ ಆಸ್ತಿ ಸ್ವತ್ತು ಮಾಡಿಕೊಳ್ಳಬೇಕು.

ಸಿದ್ದರಾಮಯ್ಯ ಸರ್ಕಾರ ಸುವರ್ಣ ಅವಕಾಶ ನೀಡಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಡಿ.ವೀರೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರಸಾಬ್, ಪುರಸಭೆ ಸದಸ್ಯರಾದ ಲಕ್ಷ್ಮೀದೇವಿ ನಾಯಕ, ರೇವಣಸಿದ್ದಯ್ಯಸ್ವಾಮಿ, ಶಾಬೀರ್‌ಪಾಷಾ, ಹುಸೇನ್‌ಬಾಷಾ, ಪುರಸಭೆ ಸಿಒ ಪರಶುರಾಮ ದೇವಮಾನೆ, ಪ್ರಮುಖರಾದ ರಾಜಾ ಸುಭಾಷನಾಯಕ, ವೀರೇಶ, ರಾಮಕೃಷ್ಣ, ಚಂದ್ರ ಖಾಜಗಾರ, ಸತ್ತರ್ ಬಂಗ್ಲೆವಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net