ದಾವಣಗೆರೆಯಲ್ಲಿ ಪ್ರಾಪರ್ಟಿ ಪರೇಡ್: 4.63 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಮರಳಿಸಿದ ಪೊಲೀಸರು

dvg property pared jan 10
Published on

ದಾವಣಗೆರೆ: ಜಿಲ್ಲೆಯಲ್ಲಿ 2021 ರಲ್ಲಿ ವಿವಿಧ ಕಳ್ಳತನ, ವಂಚನೆ ಇನ್ನಿತರ ಪ್ರಕರಣಗಳಲ್ಲಿ ಒಟ್ಟು 4.63 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಅವುಗಳನ್ನು ಸಂಬಂಧಿಸಿದವರಿಗೆ ಸೋಮವಾರ ಒಪ್ಪಿಸಲಾಯಿತು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗದು, ಬೈಕು, ಕಾರು, ಆಟೋ ಇನ್ನಿತರ ವಾಹನಗಳು, ಚಿನ್ನದ ಆಭರಣಗಳು, ಅಡಕೆ ಚೀಲಗಳು, ಸಿಲಿಂಡರ್ ಮುಂತಾದವುಗಳನ್ನು ಅವುಗಳ ವಾರಸುದಾರರಿಗೆ ಮರಳಿಸಲಾಯಿತು.

ಒಟ್ಟು 500 ಪ್ರಕರಣಗಳ ಪೈಕಿ 250 ಪತ್ತೆ ಮಾಡಲಾಗಿದೆ. ಅವುಗಳಲ್ಲಿ ಕೆಲವು ಶೇ. 100 ರಷ್ಟು ಸ್ವತ್ತುಗಳು ಸಿಕ್ಕಿವೆ. ಅವುಗಳ ಪೆರೇಡ್ ನಡೆಸಿ ಸಂಬಂಧಪಟ್ಟವರಿಗೆ ಹಿಂತಿರುಗಿಸಲಾಯಿತು.

ಆ ಪ್ರಕರಣಗಳ ಪೈಕಿ ಸಿ.ಇ.ಎನ್. ಠಾಣೆ ಪೊಲೀಸರು ವಶಪಡಿಸಿಕೊಂಡ 67 ಕೆಜಿಯಷ್ಟು ಪೆಂಗೋಲಿನ್ ಚಿಪ್ಪುಗಳು, ಮೆಕ್ಕೆಜೋಳ ಮಾರಾಟ ವ್ಯವಹಾರದಲ್ಲಿ ರೈತರಿಗೆ ವಂಚಿಸಿದ ಪ್ರಕರಣದಲ್ಲಿ ಆರ್.ಎಂ.ಸಿ. ಯಾರ್ಡ್ ಠಾಣೆ ಪೊಲೀಸರು 2.68 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿರುವುದು, ಬ್ಯಾಂಕ್ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡುತ್ತಿದ್ದ 12 ಪ್ರಕರಣಗಳು (ಒ.ಜಿ. ಕುಪ್ಪಂ ತಂಡ) ಪ್ರಮುಖವಾದವುಗಳು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಹಾಯಕ ಪೊಲೀಸ್ ಅಧೀಕ್ಷಕಿ ಕನಿಕಾ ಸಿಕ್ರಿವಾಲ್, ಡಿವೈಎಸ್ಪಿಗಳಾದ ನರಸಿಂಹ ತಾಮ್ರಧ್ವಜ, ಬಸವರಾಜ, ಕೆ.ಎಂ. ಸಂತೋಷ್, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net