

ಬಸವನಬಾಗೇವಾಡಿ: ಸಾರ್ವಜನಿಕರು ತಮಗೆ ಸಂಬಂಧಿತ ಆಸ್ತಿಗಳ ಖಾತೆಗಳನ್ನು ಗಣಕೀಕೃತಗೊಳಿಸುವುದು ಕಡ್ಡಾಯವಾಗಿದೆ. ಪಟ್ಟಣದ ಎಲ್ಲ ಆಸ್ತಿಗಳ ಮಾಲೀಕರು ತಮ್ಮ ತಮ್ಮ ಆಸ್ತಿಗಳ ಖಾತೆಗಳನ್ನು ಇಂದಿನಿಂದಲೇ ಗಣಕೀಕೃತ ಮಾಡಿಸಿಕೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿ ಶಬ್ಬಿರ್ ರೇವೂಡಕರ ತಿಳಿಸಿದ್ದಾರೆ.
ಮನಗೂಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ್ಲ ಆಸ್ತಿ ಮಾಲೀಕರು ಗಣಕೀಕೃತ ಉತಾರ ಪಡೆದುಕೊಳ್ಳಲು ಸಲ್ಲಿಸಬೇಕಾದ ದಾಖಲೆಗಳನ್ನು ಬಿನ್ ಶೇತ್ಕಿ (ಎನ್.ಎ) ಗ್ರಾಮ ಠಾಣಾ ಆಸ್ತಿಗಳ ಮಾಲೀಕರು ಉತಾರ ನಕ್ಷೆ, ಜಿ.ಪಿ.ಎಸ್, ಭಾವಚಿತ್ರ, ಮನೆ ಉತಾರ, ಪೋಟೋ, ವೋಟರ್ ಐಡಿ, ಪ್ಯಾನ್ ಕಾರ್ಡ್, 2024/25ನೇ ಸಾಲಿನ ಎಸ್.ಎಸ್.ಸನ್, 24/25ರ ವರಗೆ ಭರಣಾ ಮಾಡಿದ ಆಸ್ತಿ ತೆರಿಗೆ ನೀರಿನ ಕರ, ಅರ್ಜಿ ನಮೊನೆ, ಕಟ್ಟಡ ಪರವಾನಗಿ ಅಥವಾ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಲಗತಿಸಬೇಕು.
ಎಲ್ಲ ದಾಖಲೆಯೊಂದಿಗೆ ಪಪಂ ಕಂದಾಯ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ಗಣಕೀಕೃತ ಉತಾರ ಪಡೆದುಕೊಳ್ಳಬೇಕು ಎಂದು ಪ.ಪಂ. ಮುಖ್ಯಾಧಿಕಾರಿ ಶಬ್ಬಿರ್ ರೇವೂಡಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.