ತಾಳಿಕೋಟೆ: ಸಾರ್ವಜನಿಕರ ಆಸ್ತಿಗಳ ಖಾತೆಗಳನ್ನು ಗಣಕಿಕೃತಗೊಳಿಸಿಕೊಳ್ಳುವುದು ಕಡ್ಡಾಯವಾಗಿದ್ದು ಪಟ್ಟಣದ ಎಲ್ಲ ಆಸ್ತಿ ಮಾಲೀಕರು ತಮ್ಮ ತಮ್ಮ ಆಸ್ತಿಗಳ ಖಾತೆಗಳನ್ನು ಗಣಕಿಕೃತ ಮಾಡಿಸಿಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ ಅವರು ತಿಳಿಸಿದ್ದಾರೆ.
ಸಿಟಿಎಸ್ ಆಸ್ತಿಯಾದಲ್ಲಿ ಸಿಟಿಎಸ್ ಉತಾರ, ಸಿಟಿಎಸ್ ನಕ್ಷೆ, ಮಾಲೀಕರ ಭಾವಚಿತ್ರ, ಮನೆ ಜಿಪಿಎಸ್ ಫೋಟೋ, ಓಟರ್ ಐಡಿ ಅಥವಾ ಪ್ಯಾನ್ ಕಾರ್ಡ್, ಸನ್ 2024-25ನೇ ಸಾಲಿನ ಎಸ್‌ಎಎಸ್, ಸನ್ 2024-25ರವರೆಗೆ ಭರಣಾ ಮಾಡಿದ ನೀರಿನ ಕರ, ಅರ್ಜಿ ನಮೂನೆ, ಕಟ್ಟಡ ಪರವಾನಗಿ ಅಥವಾ ಪೂರ್ಣಗೊಂಡ ಪ್ರಮಾಣಪತ್ರ ಲಗತ್ತಿಸಬೇಕೆಂದು ಅವರು ತಿಳಿಸಿದ್ದಾರೆ.
ಬಿನ್ ಶೇತ್ಕಿ ಆಸ್ತಿಯಾದಲ್ಲಿ ಎನ್‌ಎ ಆರ್ಡರ್ ಕಾಪಿ, ಕೆಜಿಪಿ ಅಥವಾ ನಕ್ಷೆ, ಖರೀದಿ ಬಾಂಡ್, ಮನೆ ಅಥವಾ ಖಾಲಿ ಜಾಗ ಜಿಪಿಎಸ್ ಫೋಟೋ, ಮಾಲೀಕರ ಭಾವಚಿತ್ರ, ಓಟರ್ ಐಡಿ ಅಥವಾ ಪ್ಯಾನ್ ಕಾರ್ಡ್, ಸನ್ 2024-25ನೇ ಸಾಲಿನ ಎಸ್‌ಎಎಸ್, ನೀರಿನ ಕರ ಭರಣಾ ಮಾಡಿದ ಚಲನ, ಅರ್ಜಿ ನಮೂನೆ, ಕಟ್ಟಡ ಪರವಾನಗಿ ಅಥವಾ ಪೂರ್ಣಗೊಂಡ ಪ್ರಮಾಣಪತ್ರ ಲಗತ್ತಿಸಿ ಪುರಸಭೆಯ ಕಂದಾಯ ವಿಭಾಗದಲ್ಲಿ ಅರ್ಜಿ ಸಲ್ಲಿಸಿ ಗಣಿಕಿಕೃತ ಉತಾರ ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.