ಕ್ಷಯ ರೋಗಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ

ಅರಕೇರಾ ತಾಲೂಕಿನ ಗಲಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನದ ನಿಮಿತ್ತ ಟಿಎಚ್‌ಒ ಡಾ.ಬನದೇಶ್ವರ ಕ್ಷಯ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಿದರು. ಕ್ಷಯ ರೋಗ ಕಾಯಕ್ರಮದ ಜಿಲ್ಲಾ ಸಂಯೋಜಕ ಅಮರೇಶ ಕುಮಾರ, ವೈದ್ಯಾಧಿಕಾರಿ ಅಖಿಲೇಶ್ ಕುಮಾರ್, ಕ್ಷಯ ರೋಗದ ತಾಲೂಕು ಮೇಲ್ವಿಚಾರಕ ಮಹೇಶ ನಾಯಕ ಇದ್ದರು.

Published on

ಅರಕೇರಾ: ಕ್ಷಯ ರೋಗ ಗುಣಪಡಿಸಬಹುದಾದ ಕಾಯಿಲೆಯಾಗಿದ್ದರೂ ಸೂಕ್ತ ಚಿಕಿತ್ಸೆ ಅಗತ್ಯ. ಸೋಂಕಿತರು ನಿರ್ಲಕ್ಷೃ ಮಾಡದೇ ಚಿಕಿತ್ಸೆ ಪಡೆಯಿರಿ ಎಂದು ಟಿಎಚ್‌ಒ ಡಾ.ಬನದೇಶ ಹೇಳಿದರು.

ತಾಲೂಕಿನ ಗಲಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಘಟಕ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನದ ನಿಮಿತ್ತ ಕ್ಷಯ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ನೀಡಲು ನಿಕ್ಷಯ ಮಿತ್ರ ಯೋಜನೆಯಡಿ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಬೆಂಗಳೂರಿನ ಸ್ವಾಮಿ ವಿವೇಕಾನಂದ ಫೌಂಡೇಶನ್ ಸಹಕಾರ ನೀಡುತ್ತಿದೆ. ಗಲಗ ಪಿಎಚ್‌ಸಿ ವ್ಯಾಪ್ತಿಯ 15 ರೋಗಿಗಳನ್ನು ದತ್ತು ಪಡೆದು ಆರು ತಿಂಗಳವರೆಗೆ ಪೌಷ್ಟಿಕ ಆಹಾರ ಕಿಟ್ ನೀಡಲಾಗುತ್ತದೆ ಎಂದರು.

ಕ್ಷಯ ರೋಗ ಕಾಯಕ್ರಮದ ಜಿಲ್ಲಾ ಸಂಯೋಜಕ ಅಮರೇಶ ಕುಮಾರ ಮಾತನಾಡಿ, ಬ್ಯಾಕ್ಟೀರಿಯಾದಿಂದ ಕ್ಷಯ ರೋಗ ಉಂಟಾಗುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಗಾಳಿಯಲ್ಲಿ ಸೂಕ್ಷ್ಮಸೊಂಕು ಬೆರೆತು ಇತರರಿಗೆ ಹರಡುತ್ತದೆ. ಕ್ಷಯ ರೋಗಿಗಳು ವೈದ್ಯಕೀಯ ಚಿಕಿತ್ಸೆ, ನಿಯಮಿತ ಔಷಧ ಸೇವನೆ, ವೈಯಕ್ತಿಕ ನೈರ್ಮಲ್ಯ ಕಾಪಾಡಬೇಕು ಎಂದರು.

ವೈದ್ಯಾಧಿಕಾರಿ ಅಖಿಲೇಶ್ ಕುಮಾರ್, ಕ್ಷಯ ರೋಗದ ತಾಲೂಕು ಮೇಲ್ವಿಚಾರಕ ಮಹೇಶ ನಾಯಕ, ಭೀಮೇಶಪ್ಪ, ಲ್ಯಾಬ್ ಟೆಕ್ನಿಷಿಯನ್ಸ್‌ರಾದ ಚಂದ್ರು, ರಾಜಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net