ಆಪರೇಷನ್ ಸಿಂಧೂರ ಮೂಲಕ ತಕ್ಕಪಾಠ

vjp 8-3
ಪಹಲ್ಗಾಮ್ ದಾಳಿಗೆ ಭಾರತ ದೇಶದ ಯೋಧರು ಪ್ರತಿಕಾರ ತೀರಿಸಿದ ಅಂಗವಾಗಿ ವಿಜಯಪುರದ ಮಧಲಾ ಮಾರುತಿ ದೇವಸ್ಥಾನದ ಬಳಿ ದೇಶ ರಕ್ಷಕರ ಪಡೆ ಹಾಗೂ ಮೌನೇಶ್ವರ ಫೌಂಡೇಶನ್ ಪದಾಧಿಕಾರಿಗಳು ಸಂಭ್ರಮಾಚರಣೆ ನಡೆಸಿದರು. ರೋಹನ್ ಆಪ್ಟೆ, ಆಕಾಶ ಇಂಡಿ, ವಿನೋದ ಪತ್ತಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿದ ಭಾರತದ ದೇಶದ ಹೆಮ್ಮೆಯ ಸೈನಿಕರಿಗೆ ಒಳಿತಾಗಲಿ ಎಂದು ನಗರದ ಮಧಲಾ ಮಾರುತಿ ದೇವಸ್ಥಾನದಲ್ಲಿ ಬುಧವಾರ ದೇಶ ರಕ್ಷಕರ ಪಡೆ ಹಾಗೂ ಮೌನೇಶ್ವರ ಫೌಂಡೇಶನ್ ಸಹಯೋಗದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ಪಾಪಿ ಪಾಕಿಸ್ತಾನದ ಮೇಲೆ ನಡೆದ ದಾಳಿಯನ್ನು ಸಂಭ್ರಮಿಸಿದರು.

ದೇಶ ರಕ್ಷಕರ ಪಡೆ ಸಂಸ್ಥಾಪಕ ರೋಹನ್ ಆಪ್ಟೆ ಮಾತನಾಡಿ, ಪೆಹಲ್ಗಾಮ್‌ನಲ್ಲಿ ಹಿಂದು ಪ್ರವಾಸಿಗರ ಬರ್ಬರ ಹತ್ಯೆಯು ದೇಶವೇ ಬೆಚ್ಚಿ ಬಿದ್ದಿತ್ತು. ಕೇಂದ್ರ ಸರ್ಕಾರ ಇಂತಹ ಭೀಕರ ಕೃತ್ಯ ಎಸಗಿದ ಮತ್ತು ಭಯೋತ್ಪಾದನೆ ಪ್ರಚೋದಿಸುವ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ನಡೆಸುವ ಮೂಲಕ ತಕ್ಕ ಪಾಠ ಕಲಿಸಿದೆ ಎಂದರು.

ದೇಶ ರಕ್ಷಕರ ಪಡೆ ಅಧ್ಯಕ್ಷ ಆಕಾಶ ಇಂಡಿ ಮತ್ತು ಮೌನೇಶ್ವರ ಫೌಂಡೇಶನ್ ಅಧ್ಯಕ್ಷ ವಿನೋದ ಪತ್ತಾರ ಮಾತನಾಡಿದರು. ಜಗದೀಶ ರೂಗಿಮಠ, ವಿವೇಕ ತಾವರಗೇರಿ, ಹರಿಷಭಟ್ ಜೋಶಿ, ಕೃಷ್ಣಾ ಮಾಯಾಚಾರಿ, ಮನೋಜ ಅರಕೇರಿ, ಮುತ್ತು ಬಡಿಗೇರ, ವೆಂಕಟೇಶ ಸರಾಫ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net