ನಗರದಲ್ಲಿ ಪ್ರಚಾರ ಬೈಕ್ ರ‌್ಯಾಲಿ

26
Published on

ಮೈಸೂರು: ಹಾಸನದಲ್ಲಿ ಡಿ.5ರಂದು ಜರುಗುವ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ಮತ್ತು ಜನಕಲ್ಯಾಣ ಸಮಾವೇಶ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಪ್ರಚಾರ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು.

ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ವಿದ್ಯಾರಣ್ಯಪುರಂನ ಚಾಮುಂಡಿವನದ ಬಳಿ ರ‌್ಯಾಲಿಗೆ ಚಾಲನೆ ನೀಡಲಾಯಿತು. ಕಾಂಗ್ರೆಸ್ ನಗರ ಅಧ್ಯಕ್ಷ ಆರ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್, ಶ್ರೀಧರ್, ನಗರಪಾಲಿಕೆ ಮಾಜಿ ಸದಸ್ಯ ಜೆ.ಗೋಪಿ, ಮುಖಂಡರಾದ ಆರ್.ಎಚ್.ಕುಮಾರ್, ನಿರಾಲ್ ಶಾ, ಜೋಗಿ ಮಹೇಶ್, ಮಂಜು, ರಮೇಶ್, ರಾಜು, ವಿಶ್ವ, ಗುಣಶೇಖರ್, ವೀಣಾ, ಭವ್ಯಾ, ಚಂದ್ರಕಲಾ, ವಿನಯ್ ಕುಮಾರ್, ಡೇರಿ ವೆಂಕಟೇಶ್ ಇದ್ದರು.

ವಿದ್ಯಾರಣ್ಯಪುರಂನ ಚಾಮುಂಡಿ ವನದಿಂದ ಪ್ರಾರಂಭವಾಗಿ ಅಶೋಕಪುರಂ, ರಾಮಸ್ವಾಮಿ ವೃತ್ತ, ಶಾಂತಲಾ ಸಿಗ್ನಲ್, ಸಿದ್ದಪ್ಪ ಚೌಕ,ನಂಜುಮಳಿಗೆ, 101 ಗಣಪತಿ ದೇವಸ್ಥಾನ, ಅಗ್ರಹಾರ, ರಾಮಾನುಜ ರಸ್ತೆ, ಕನಕಗಿರಿಯಲ್ಲಿ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net