

ಮಡಿಕೇರಿ:
ಜಿಲ್ಲೆಯ ಅಮ್ಮತ್ತಿ ಒಂಟಿಯAಗಡಿ ಹಚ್ಚಿನಾಡು ಗ್ರಾಮದ ಜಿಲ್ಲಂಡ ಸಿ.ತನು ಭಾರತೀಯ ಸೇನೆಯಲ್ಲಿ ಸುಬೇಧಾರ್ ಆಗಿ ಬಡ್ತಿ ಹೊಂದಿದ್ದಾರೆ.
ಭಾರತೀಯ ಸೇನೆಯ ಎಎಂಸಿಯಲ್ಲಿ ಕಳೆದ ೨೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತನು, ದೆಹಲಿ, ಕೊಲ್ಕತ್ತಾ, ಜಮ್ಮು ಮಾತ್ರವಲ್ಲದೆ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಸುಬೇಧಾರ್ ಆಗಿ ಬಡ್ತಿ ಹೊಂದಿ ಮಹಾರಾಷ್ಟçದ ಪುಣೆಯಲ್ಲಿ ಸೇವೆಯಲ್ಲಿದ್ದಾರೆೆ. ಜಿಲ್ಲಂಡ ಸಿ.ತನು ಅವರ ತಂದೆ ಹಚ್ಚಿನಾಡು ಗ್ರಾಮದ ಜಿಲ್ಲಂಡ ಸಿ.ಚಂಗಪ್ಪ, ತಾಯಿ ಸರೋಜ, ಪತ್ನಿ ಗಾಯತ್ರಿ, ಇಬ್ಬರು ಪುತ್ರರಾದ ಹರನ್ ಕಾಳಪ್ಪ ಹಾಗೂ ಸೋಹನ್ ಮಾದಪ್ಪ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.