ಆಹಾರ ನಿರೀಕ ಹುದ್ದೆಗೆ ಪದೋನ್ನತಿ ನೀಡಿ

Promote to the post of Food Waiter
ಇಂಡಿ ತಾಲೂಕು ಆಡಳಿತ ಸೌಧದ ಮಂಭಾಗ ಗ್ರಾಮ ಆಡಳಿತ ಅ-ಧಿಕಾರಿಗಳು ಕಂದಾಯ ಎಸಿ ಅಬೀದ್​ ಗದ್ಯಾಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಯಲ್ಲು ಪೂಜಾರಿ, ಬಿ.ಎ. ರಾವೂರ, ಆರ್​.ಬಿ. ಮೂಗಿ, ಎಚ್​.ಎಸ್​. ಗುನ್ನಾಪುರ, ಸಿದ್ದು ಲಾಳಸಂಗಿ ಇತರರಿದ್ದರು.
Published on

ಇಂಡಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಆಡಳಿತ ಸೌಧದ ಎದುರು ಗುರುವಾರದಿಂದ ಅರ್ನಿದಿಷ್ಟಾವಧಿ ಮುಷ್ಕರ ಆರಂಭಿಸಿದರು.

ತಾಲೂಕು ಟಕದ ಅಧ್ಯ ಯಲ್ಲು ಪೂಜಾರಿ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳಾದ ಕಚೇರಿ, ಗುಣಮಟ್ಟದ ಮೊಬೈಲ್​, ಡೇಟಾ, ಸಿಮ್​ ನೀಡಬೇಕು. ಪ್ರಿಂಟರ್​, ಸ್ಕಾನರ್​, ಲ್ಯಾಪ್​ಟಾಪ್​, ಗೂಗಲ್​ ಕ್ರೋಮ್​ ಬುಕ್​ ಒದಗಿಸಬೇಕು.

ಸರ್ಕಾರಿ ರಜಾ ದಿನಗಳಂದು ಮೆಮೊ ಕೊಡುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಅಂತರ ಜಿಲ್ಲಾ ವರ್ಗಾವಣೆ ನಿಯಮ 16 (ಎ) ಉಪಖಂಡ (2) ಮರುಸೇರ್ಪಡೆ ಮಾಡಬೇಕು, ಪತಿ&ಪತ್ನಿ ವರ್ಗಾವಣೆ ಪ್ರಕರಣ ಪರಿಗಣಿಸಬೇಕು. ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಆಹಾರ ನಿರೀಕ ಹುದ್ದೆಗೆ ಪದೋನ್ನತಿ, ಕೆಲಸದ ಅವಧಿ ಮುಗಿದ ಬಳಿಕ ಇಲಾಖೆಯ ವರ್ಚುವಲ್​ ಸಭೆಗಳನ್ನು ನಡೆಸಬಾರದು, ಪ್ರಯಾಣ ಭತ್ಯೆಯನ್ನು 500 ರೂ. ನಿಂದ 3000 ರೂ.ಗೆ ಹೆಚ್ಚಳ ಮಾಡಬೇಕು, ಕರ್ತವ್ಯ ನಿರತದಲ್ಲಿ ಸಾವನ್ನಪ್ಪಿದ್ದರೆ ಅವರ ಕುಟುಂಬಸ್ಥರಿಗೆ 25 ಲ ರೂ. ಪರಿಹಾರ ನೀಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಶಿರಸ್ತೆದಾರ ಬಿ.ಎ. ರಾವೂರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದರು. ಶಿರಸ್ತೇದಾರ ಆರ್​.ಬಿ. ಮೂಗಿ, ಕಂದಾಯ ನಿರೀಕ ಎಚ್​.ಎಸ್​. ಗುನ್ನಾಪುರ, ಗ್ರಾಮ ಆಡಳಿತ ಸಂದ ಉಪಾಧ್ಯ ಸಿದ್ದು ಲಾಳಸಂಗಿ, ಗಡ್ಡೆಪ್ಪ ಅವಜಿ, ಕೆ.ಎಸ್​.ಚೌಧರಿ, ಶಿವು ವಾಲಿಕಾರ, ಪ್ರಕಾಶ ಚವಡಿಹಾಳ, ಎಂ.ಆರ್​. ರಾಠೋಡ, ಎಸ್​.ಎಸ್​. ಪೂಜಾರಿ, ಎಸ್​.ಎಸ್​. ಹಿರೇಬೇವನೂರ, ರವಿ ಪೂಜಾರಿ, ಶ್ರೀಶೈಲ ಹಂಚನಾಳ, ಎಸ್​.ಎಸ್​.ಮೊದಿ, ಪ್ರವಿಣ ಲಮಾಣಿ, ರವಿ ಪಾದಗಟ್ಟಿ, ಜಿ.ಎಂ. ಬಿರಾದಾರ, ಎಸ್​.ಎಸ್​. ಬಿರಾದಾರ, ಸತೀಶ ಮಂಗಳವಾಡೆ, ವಿದ್ಯಾ ಸರಸಂಬಿ, ಭೂಮಿಕಾ ಅವರಾದಿ, ಕವಿತಾ ಕರಜಗಿ, ಈರಮ್ಮ ಜೋಗುರ, ಸವಿತಾ ಹಚಡದ, ಎಂ.ಎಂ. ನದಾಫ, ಡಬ್ಲು.ಐ. ಇಂಡಿಕರ, ಶಂಕರ ಕಲಕೇರಿ, ಮಣಿಕಂಠ ಗೊಂದಳಿ, ಬಸವರಾಜ ಅವಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net