ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ

New Tenginakayi new
Published on

ಹುಬ್ಬಳ್ಳಿ : ಇಲ್ಲಿನ 44ನೇ ವಾರ್ಡ್​ನ ಸಂಗಿನಿ ವಿಲಾ ಕಾಲನಿ, ಸನ್​ಸಿಟಿ, ಆಂಜನೇಯ ಬಡಾವಣೆ ಹಾಗೂ ಶಬರಿ ನಗರಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ಬಡಾವಣೆಗಳಿಗೆ ಅಗತ್ಯ ರಸ್ತೆ ಸಂಪರ್ಕ ಸೇರಿ ಇನ್ನಿತರ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

ಸಂಗಿನಿ ವಿಲಾದಿಂದ ರೈಲ್ವೆ ಟ್ರ್ಯಾಕ್​ವರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಈ ಪ್ರದೇಶಗಳ ಎಲ್ಲ ಒಳ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹಾಗೂ ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಸದಸ್ಯೆ ಉಮಾ ಮುಕುಂದ, ವಾರ್ಡ್ ಅಧ್ಯಕ್ಷ ನಿಕಿಲ್ ವಂಗಿ, ಪ್ರಮುಖರಾದ ವಿನೋದ ರೇವಣಕರ, ಪ್ರೀತಮ ಇರಕಲ್, ರಾಜು ಪಟಾಡಿಯಾ, ಸೋಮನಾಥ ಮೆಹರವಾಡೆ, ವಿಜಯ ಪೂಜಾರ, ಸಚಿನ ಕಲಾಲ್, ಶ್ರವಣ ಮಹಾಜನ್, ವಾದಿರಾಜ ಕಟ್ಟಿ, ಸೋಮನಾಥ ಗಿರೆಪ್ಪಗೌಡರ, ಶಿವು ಶೆಟ್ಟರ, ಗೀತಾ ಕುಬಸದ, ಶಂಕರ ಕಡಕುಂಟ್ಲ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net