ಸಮುದಾಯ ಭವನ ನಿರ್ಮಿಸುವ ಭರವಸೆ

h28-durgadevi
Published on

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯ ಭೋವಿ ವಡ್ಡರ ಕಾಲನಿಯಲ್ಲಿ (ಸುಣ್ಣದ ಭಟ್ಟಿ) ಶ್ರೀ ದುರ್ಗಾದೇವಿಯ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವ, ಕಾರ್ತಿಕ ದೀಪೋತ್ಸವ ಬುಧವಾರ ಏರ್ಪಡಿಸಲಾಗಿತ್ತು.

ಮಾತೋಶ್ರಿ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಶ್ರೀ ದುರ್ಗಾದೇವಿಗೆ ಮಹಾಭಿಷೇಕ ಮಾಡಿ, ಪುಷ್ಪಗಳಿಂದ ಅಲಂಕರಿಸಿ ಪೂಜೆ-ಕೈಂಕರ್ಯ ನೆರವೇರಿಸಿದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಜತೆಗೆ ಸಮುದಾಯ ಭವನ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ನಂತರ ಅನ್ನ ಸಂತರ್ಪಣೆ ಜರುಗಿತು.

ದೇವಸ್ಥಾನದ ಅಧ್ಯಕ್ಷ ಲಕ್ಷ್ಮಣ ವಡ್ಡರ, ಶರೀಫ ಅದವಾನಿ, ನರಸಿಂಹ ಭೋಜಗಾರ, ಅರ್ಚಕ ಪರಶುರಾಮ ಭೋಜಗಾರ, ಉಳಿದಂತೆ ಮಾದೇವ ಭೋಜಗಾರ, ರಾಘವೇಂದ್ರ ಭೋಜಗಾರ, ರಾಜು ಭೋವಿವಡ್ಡರ, ರಮೇಶ ಭೋಜಗಾರ, ಸದಾನಂದ ಭೋಜಗಾರ, ಸಂಗೀತಾ ಠಾಕೂರ, ಲಕ್ಷ್ಮೀ ಭೋಜಗಾರ, ಸುರೇಖಾ ಭೋಜಗಾರ, ಸಂಧ್ಯಾ ಭೋಜಗಾರ, ಶಶಿಕಲಾ ಹಿರೇಮಠ, ಜ್ಯೋತಿ ಹರಿಜನ, ಬಸಮ್ಮ ಹಿರೇಮಠ, ಸರಸ್ವತಿ ಮೇಲಿನಮನಿ, ಯಲ್ಲಮ್ಮ ವಡ್ಡರ, ತೇಜಸ್ವಿನಿ ಭೋಜಗಾರ, ಕೋಮಲ ಭೋಜಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net