

ಹರಿಹರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಬುಧವಾರ ರಾತ್ರಿ ಲಕ್ಕಶೆಟ್ಟಿಹಳ್ಳಿ ಹಾಗೂ ಬನ್ನಿಕೋಡು ಗ್ರಾಮದ ತಲಾ ಒಂದು ಕಚ್ಚಾ ಮನೆಗೆ ಭಾಗಶ: ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಮಳೆಯ ವಿವರ: ಹರಿಹರ-3.8 ಮಿ.ಮೀ., ಕೊಂಡಜ್ಜಿ-2.6 ಮಿ.ಮೀ., ಹೊಳೆಸಿರಿಗೆರೆ-3.2 ಮಿ.ಮೀ, ಮಲೆಬೆನ್ನೂರು- 5.6 ಮಿ.ಮೀ. ಒಟ್ಟು 15.2 ಮಿ.ಮೀ ಮಳೆಯಾದ ವರದಿಯಾಗಿದೆ.