ಸಹೋದರಿಗೆ ರಕ್ಷಣೆಯ ಭರವಸೆ

Promise of protection for sister
Published on

ವಿಜಯಪುರ : ರಾ ಬಂಧನ ಹಬ್ಬವು ಸಹೋದರ ಮತ್ತು ಸಹೋದರಿಯರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವಾಗಿದೆ ಎಂದು ಪ್ರಾಚಾರ್ಯ ಎಸ್​.ಕೆ. ಚೌದರಿ ಹೇಳಿದರು. ನಗರ ಹೊರ ವಲಯದ ಜುಮನಾಳ ಕ್ರಾಸ್​ ಬಳಿಯ ಪ್ರಾರ್ಥನಾ ಪಬ್ಲಿಕ್​ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ರಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಕ್ಷಾ ಬಂದನ ಹಬ್ಬ ಕೇವಲ ರಕ್ತ ಹಂಚಿಕೊಂಡು ಹುಟ್ಟಿರುವ ಸಹೋದರ ಮತ್ತು ಸಹೋದರಿಯರು ಮಾತ್ರ ಆಚರಿಸಬೇಕೆಂದೇನಿಲ್ಲ. ನಾವು ಅಣ್ಣ, ತಂಗಿಯೆನ್ನುವ ಭಾವನೆಯನ್ನು ಹೊಂದಿರುವ ಪ್ರತಿಯೊಬ್ಬರೂ ಈ ಹಬ್ಬವನ್ನು ಆಚರಿಸಬಹುದಾಗಿದೆ ಎಂದು ತಿಳಿಸಿದರು.

ರಕ್ಷಾ ಬಂಧನ ದಿನ ಸಹೋದರನ ಮಣಿಕಟ್ಟಿಗೆ ಪವಿತ್ರ ದಾರ ಕಟ್ಟುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ಸಹೋದರಿ ಕಟ್ಟಿದ್ದ ಪವಿತ್ರ ದಾರಕ್ಕೆ ಪ್ರತಿಯಾಗಿ ಅವಳಿಗೆ ರಣೆಯ ಭರವಸೆ ನೀಡುತ್ತಾನೆ. ಇದೊಂದು ಉತ್ಸಾಹ, ಸಂಪ್ರದಾಯ ಮತ್ತು ನಂಬಿಕೆಯೊಂದಿಗೆ ಬೆಸೆದಿರುವ ಹಬ್ಬವಾಗಿದೆ ಎಂದರು.

ವಿಜಯಪುರದ ಹೊರ ವಲಯದ ಪ್ರಾರ್ಥನಾ ಪಬ್ಲಿಕ್​ ಶಾಲೆಯಲ್ಲಿ ಹಮ್ಮಿಕೊಂಡ ರಾ ಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net