ನೊಂದ ಕುಟುಂಬಕ್ಕೆ ನೆರವಿನ ಭರವಸೆ

FotoJet 11111111
Published on

ರಾಷ್ಟ್ರಪತಿಗೆ ಪತ್ರ ಬೆರದಿದ್ದ ಬಸವನಪಲ್ಲಿ ಕುಟುಂಬ | ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ

ರಾಯಲ್ಪಾಡು: ಜಾತಿ ಹೆಸರಿನಲ್ಲಿ ನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬೆರದಿದ್ದ ಹೋಬಳಿಯ ಬಸವನಪಲ್ಲಿಯ ನಿವಾಸಿ ನರಸಿಂಹಪ್ಪ ಕುಟುಂಬಕ್ಕೆ ಸಮಾಜಕಲ್ಯಾಣ ಅಧಿಕಾರಿಗಳು ಧೈರ್ಯ ಹೇಳಿದರು.

ಇತ್ತೀಚೆಗೆ ಸಮಾಜ ಕಲ್ಯಾಣ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಸ್ಥರ ದುಃಖ & ದುಮ್ಮಾನ ಆಲಿಸಿದರು. ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್​ ಮಾತನಾಡಿ, ನರಸಿಂಹಪ್ಪ ಕುಟುಂಬಕ್ಕೆ ಶ್ರೀಘ್ರದಲ್ಲಿ ಮನೆ, ಕಾಂಪೌಂಡ್​, ಶೌಚಗೃಹವನ್ನು ಗ್ರಾಪಂನಿಂದ ಒದಗಿಸಿಕೊಡಲಾಗುವುದು ಎಂದು ಆತ್ಮಸ್ಥ್ಐರ್ಯ ತುಂಬಿದರು.

ನರಸಿಂಹಪ್ಪ ಮಾತನಾಡಿ, ಇಲಾಖೆಗೆ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್​, ಸಮಾಜ ಕಲ್ಯಾಣ ಇಲಾಖೆ ಮೇಲ್ವಿಚಾರಕ ಮೂರುಕಣ್ಣಪ್ಪ, ಗ್ರಾಪಂ ಅಧ್ಯಕ್ಷ ಗಂಗಾಧರ್​, ಆರ್​ಐ ಶಂಕರರೆಡ್ಡಿ, ವಿ.ಎ.ಅನಿತಾ, ಗ್ರಾಪಂ ಸಿಬ್ಬಂದಿ ಶ್ರೀ ರಾಮ, ಜಲಗಾರರು ಇದ್ದರು.

ಒತ್ತುವರಿ ಆರೋಪ: ರಾಷ್ಟ್ರಪತಿಗೆ ಪತ್ರ ಬೆರದಿರುವ ನರಸಿಂಹಪ್ಪ ಅವರು, ಗ್ರಾಮದ ಪ್ರಮುಖ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. 2024ರಲ್ಲೇ ಶ್ರೀನಿವಾಸಪುರ ತಾಪಂ ಇಒ, ಪಿಡಿಒ, ಪೊಲೀಸರಿಗೆ ದೂರು ಸಲ್ಲಿಸಿ, ಸರ್ವೇ ನಡೆಸಿದಾಗ 4.80 ಮೀಟರ್​ ಒತ್ತುವರಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅಂದೇ ತೆರವು ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದರೂ ಇನ್ನೂ ತೆರವುಗೊಳಿಸಿಲ್ಲ. ಪ್ರಶ್ನಿಸಲು ಹೋದವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥಾರದ ರೆಡ್ಡೆಪ್ಪ, ಗೋವಿಂದ, ಆನಂದ್​ ಇತರರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net