

ನರಗುಂದ: ಕೋಮುದ್ವೇಷಕ್ಕೆ ಬಲಿಯಾದ ಪಟ್ಟಣದ ಸಮೀರ್ ಶಹಾಪೂರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯನವರು ಈಗಾಗಲೇ 25 ಲಕ್ಷ ರೂ.ಪರಿಹಾರದ ಚೆಕ್ ವಿತರಿಸಿದ್ದಾರೆ.
ಮುಖ್ಯಮಂತ್ರಿಯವರು ನೀಡಿರುವ ಭರವಸೆಯಂತೆ ಸಮೀರ್ ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಪಟ್ಟಣದಲ್ಲಿ ಸಮೀರ್ ಶಹಾಪೂರ ಕುಟುಂಬದವರಿಗೆ ಶನಿವಾರ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಘಟಕದ ಮುಖಂಡ ರಮಜಾನಸಾಬ್ ನದಾಫ್ ಮಾತನಾಡಿ, ಸರ್ಕಾರದಿಂದ ಪರಿಹಾರ ವಿತರಣೆ ಮಾಡುವಾಗ ಜಾತಿ-ಮತ, ಬೇಧ-ಭಾವ ಮಾಡಬಾರದು ಎನ್ನುವುದನ್ನು ಸಿಎಂ ತೋರಿಸಿಕೊಟ್ಟಿದ್ದಾರೆ ಎಂದರು.
ನರಗುಂದ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರವೀಣ ಯಾವಗಲ್, ಅಪ್ಪಣಗೌಡ ನಾಯ್ಕರ, ಸತ್ತಾರಸಾಬ ಗಸ್ತಿ, ಕೆ.ಬಿ. ಖಲೀಫ್, ಎಚ್.ಎಂ.ಪಾಣಿಗಟ್ಟಿ, ಮೌಲಾಸಾಬ ಅರಬಜಮಾದಾರ, ರಾಜು ಕಲಾಲ, ಬಿ.ಐ.ಕಡಕೋಡ, ವಿರೇಶ ಚುಳಕಿ, ವಿಠ್ಠಲ ಶಿಂಧೆ, ಪ್ರಕಾಶ ಹಡಗಲಿ, ಐ.ಎಫ್.ಕಮಾಲಖಾನ್, ಗುರುಪಾದಪ್ಪ ಕುರಹಟ್ಟಿ, ಬಸವರಾಜ ಗಾಡಗೋಳಿ, ಎಸ್.ಕೆ. ದಂಡಾಪೂರ, ಎಂ.ಬಿ. ಅರಹುಣಸಿ, ಇತರರಿದ್ದರು.