ಮಾರುತಿ ನಗರ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯ ಭರವಸೆ

New Maruti nagar New
Published on

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ ಇಂಡಸ್ಟ್ರಿಯಲ್​ ಎಸ್ಟೇಟ್​ ವ್ಯಾಪ್ತಿಯ 48ನೇ ವಾರ್ಡ್​ನ ಮಾರುತಿ ನಗರವನ್ನು

ಕೊಳಚೆ ಅಭಿವೃದ್ಧಿ ಮಂಡಳಿಗೆ ಸೇರಿಸುವಂತೆ ಸಾರ್ವಜನಿಕರು ನೀಡಿದ ಹಕ್ಕು ಪತ್ರಗಳ ಮನವಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಸ್ವೀಕರಿಸಿದರು.

ಕಳೆದ ಸುಮಾರು 60 ರಿಂದ 70 ವರ್ಷಗಳಿಂದ ಮಾರುತಿ ನಗರದಲ್ಲಿ ವಾಸಿಸುತ್ತಿರುವ ಜನರು ಹಕ್ಕು ಪತ್ರ ನೀಡುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಹಕ್ಕುಪತ್ರ ವಿತರಣೆಗೆ ಪ್ರಯತ್ನಿಸುವ ಭರವಸೆ ನೀಡಿದರು. ಮಾರುತಿ ನಗರದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ರಮೇಶ ಬೆಳಗಾವಿ, ಆನಂದ ಕಾಂಬಳೆ, ಶರಣಪ್ಪ ಮ್ಯಾಗೇರಿ, ಶಿವಾಜಿ ಪರಸಪ್ಪನವರ, ಅಧಿಕಾರಿಗಳಾದ ಕಲ್ಲಗೌಡ ಪಾಟೀಲ, ಪ್ರವಿಣ ಎಚ್​., ಮೋಹನ ಶಿವಣ್ಣನವರ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net