

ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 39ರ ಗುರುದೇವ ನಗರ, ಬಾಪೂಜಿ ನಗರದ 2,3 ಮತ್ತು 4ನೇ ಕ್ರಾಸ್‌ನ ಮುಖ್ಯ ಒಳ ರಸ್ತೆಗಳ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಹಾಗೆಯೇ ಉಳಿದಿದ್ದ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ಆರಂಭವಾಗಲಿದೆ. ಎಲ್ಲ ವಾರ್ಡ್‌ಗಳ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.
ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್, ಪರಶುರಾಮ ವಾಸ್ತೆ, ಮೋಹನ ಬಡಿಗೇರ, ದೇವೇಂದ್ರ ಪಾಟೀಲ, ಕೃಷ್ಣ ಪಾಸ್ಟೆ, ಪಿ.ಕೆ. ಹೂಗಾರ, ದೇವೇಂದ್ರಪ್ಪ ಹಡಗಲಿ, ರಮೇಶ ಹೊಟಟ್ಟಿ, ಯಲ್ಲಪ್ಪ ಬಿಜಾಪುರ, ಪ್ರಶಾಂತ ಬೆಳಮಕರ, ರಘು ಧಾರವಾಡಕರ, ಸಿದ್ದು ಮೊಗಲಿಶೆಟ್ಟರ್, ಸುದರ್ಶನ ದಿನ್ನಿಹಳ್ಳಿ, ಮುರಳಿ ಗಲಗಲಿ ಇತರರು ಉಪಸ್ಥಿತರಿದ್ದರು.