ನಿರಾಶ್ರಿತರಿಗೆ ಪರ್ಯಾಯ ನಿವೇಶನ ನೀಡುವ ಭರವಸೆ

2ald-1
ಆವತಿ ಹೋಬಳಿ ಅರೆನೂರು ಗ್ರಾಮದ ಕಾಳಜಿ ಕೇಂದ್ರಕ್ಕೆ ಬಿಜೆಪಿಯ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಭೇಟಿ ನೀಡಿ ಸಂತ್ವಾನ ಹೇಳಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ದೇವರಾಜ್ ಶೆಟ್ಟಿ, ದೀಪಕ್ ದೊಡ್ಡಯ್ಯ ಮುಂತಾದವರಿದ್ದರು.
Published on

ಆಲ್ದೂರು: ಆವತಿ ಹೋಬಳಿಯ ರೆನೂರು ಗ್ರಾಮದ ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿ ಅರೆನೂರು ಗ್ರಾಮದ ಕಾಳಜಿ ಕೇಂದ್ರದಲ್ಲಿರುವ ಆರು ಕುಟುಂಬಗಳನ್ನು ಶುಕ್ರವಾರ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಭೇಟಿ ನೀಡಿ ಪರಿಸ್ಥತಿ ಅವಲೋಕಿಸಿದರು.
ಮಕ್ಕಳ ಕೊರತೆಯಿಂದ ಮುಚ್ಚಿದ್ದ ಆವತಿ ಹೋಬಳಿಯ ಅರೆನೂರು ಗ್ರಾಮದ ಪ್ರಾಥಮಿಕ ಪಾಠ ಶಾಲೆಯನ್ನು ಕಾಳಜಿ ಕೇಂದ್ರವನ್ನಾಗಿ ಮಾಡಲಾಗಿದ್ದು,ಅರೆನೂರು ಗ್ರಾಮದ ಹೊನ್ನಳ್ಳಿ ಗ್ರಾಮದ 6 ಕುಟುಂಬಗಳ ಮೂರು ಮಕ್ಕಳು ಸೇರಿದಂತೆ ಒಟ್ಟು 15 ಜನರಿಗೆ ಈ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ನಾವು ವಾಸವಿರುವ ಜಾಗದಲ್ಲಿ ಭೂ ಕುಸಿತ ಉಂಟಾಗುತ್ತಿದೆ. ನಾವು ಜೀವ ಭಯದಲ್ಲೇ ಬದುಕುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ನಮಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ನಾವು ಈ ಪರಿಸ್ಥತಿಯಲ್ಲಿ ವಾಸಿಸಲು ಸಾಧ್ಯವಿಲ್ಲ ನಮಗೆ ಪರ್ಯಾಯ ನಿವೇಶನ ನೀಡಬೇಕು ಎಂದು ನಿರಾಶ್ರಿತರು ಅಳಲು ತೊಡಿಕೊಂಡರು.
ಶಾಸಕ ಅಶ್ವಥ್ ನಾರಾಯಣ ಮಾತನಾಡಿ, ನಿಮಗೆ ನಿವೇಶನ ಕೂಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಅಧಿಕಾರಿಗಳ ಜತೆ ಮಾತನಾಡಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಸುಮಂತ್ ಮಾತನಾಡಿ, ಅರೆನೂರು ಗ್ರಾಮದ ಸರ್ವೇ ನಂಬರ್ 32ರಲ್ಲಿ 2.5ಎಕರೆ ಜಾಗವನ್ನು ನಾವು ಪರ್ಯಾಯವಾಗಿ ಗುರುತು ಮಾಡಲಾಗಿದೆ. ಆದರೆ ಆ ಜಾಗ ಡೀಮ್ಡ್ ಪಟ್ಟಿಗೆ ಸೇರಿದೆ ಅರಣ್ಯ ಇಲಾಖೆಯ ಅನುಮತಿಗೆ ಕಳುಹಿಸಲಾಗಿದೆ. ಅನುಮತಿ ನೀಡಿದ ತಕ್ಷಣ ನಿವೇಶನವನ್ನಾಗಿ ಬದಲಾಯಿಸಿ ಒಂದು ಕುಟುಂಬಕ್ಕೆ 4 ಗುಂಟೆಯಂತೆ 6 ಕುಟುಂಬಗಳಿಗೆ ನಿವೇಶನ ನೀಡಲಾಗುವುದು ಎಂದರು.
ಬಿಜೆಪಿ ಜಿಲ್ಲಾಅಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಆಲ್ದೂರು, ಮೂಡಿಗೆರೆ ಮಂಡಲದ ಅಧ್ಯಕ್ಷರಾದ ರವಿ,ಗಜೇಂದ್ರ,ಪ್ರಧಾನ ಕಾರ್ಯದರ್ಶಿ ರವೀಂದ್ರ,ಅರವಿಂದ್ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್, ಮನು, ಯುವ ಮೋರ್ಚಾ ಅಧ್ಯಕ್ಷ ಸಿಂಧೂ, ಬೈಗೂರು ನಾಗೇಶ್, ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್. ಕವೀಶ್, ಸುಪ್ರಿತ್ ಅರೆನೂರು, ದೇವರಳ್ಳಿ ಅರುಣ್, ಕಂದಾಯ ಅಧಿಕಾರಿ ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿ ಶಾಶ್ವತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net