

ಬೆಂಗಳೂರು: ಕಾಲೇಜು ದಿನಗಳಲ್ಲಿ ಏರ್ಪಡಿಸುವ ಪ್ರದರ್ಶನಗಳಲ್ಲಿ ಆವಿಷ್ಕರಿಸುವ ಪ್ರಾಜೆಕ್ಟೃ್ಗಳು ಕೇವಲ ಒಂದು ಅಸೈನ್ಮೆಂಟ್ ಮಾತ್ರವಲ್ಲ ಭವಿಷ್ಯದ ದಿಕ್ಸೂಚಿಗಳಾಗಬಹುದು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಅಕಾಲ್ವಿಯೋ ಟೆಕ್ನಾಲಜಿಸ್ ಕಂಪನಿಯ ಸಹ ಸಂಸ್ಥಾಪಕ ರಾಜ್ ಗೋಪಾಲಕೃಷ್ಣ ಹೇಳಿದರು.
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿದ್ದ ಎರಡು ದಿನಗಳ ಪ್ರದರ್ಶನ 2025ಕ್ಕೆ ಚಾಲನೆ ನೀಡಿ ಮಾತನಾಡಿದರು. ನಾನು ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಪ್ರಾಜೆಕ್ಟೃ್ಗಳನ್ನು ಮಾಡಿದ್ದೆ. ನಾನು ಮಾಡಿದ ಪ್ರಾಜೆಕ್ಟೃ್ ನೋಡಿಯೇ ನನಗೆ ಅಮೆರಿಕಾದಲ್ಲಿ ಕೆಲಸ ಮಾಡುವ ಆಫರ್ ಸಿಕ್ಕಿತ್ತು. ಹೀಗಾಗಿ ವಿದ್ಯಾರ್ಥಿಗಳು ಪ್ರಾಜೆಕ್ಟೃ್ಗಳನ್ನು ಕಡೆಗಣಿಸಬಾರದು. ಇದೊಂದು ಅವಕಾಶ ಎಂಬ ರೀತಿಯಲ್ಲಿ ಭಾವಿಸಿ ಉತ್ತಮವಾದ ಪ್ರಾಜೆಕ್ಟೃ್ಗಳನ್ನು ರೂಪಿಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಕುತೂಹಲವನ್ನು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಹೊಸತನವನ್ನು ನಾವು ಹುಡುಕಲು ಮತ್ತು ಕಲಿಯಲು ಸಾಧ್ಯ. ಕಲಿಕೆ ಎಂಬುದು ನಿರಂತರ. ವಿದ್ಯಾರ್ಥಿಗಳು ಪ್ರತಿನಿತ್ಯ ಕಲಿಯುತ್ತಲೇ ಇರಬೇಕು ಎಂದು ಸಲಹೆ ನೀಡಿದರು.
ಬುಧವಾರ ಮತ್ತು ಗುರುವಾರ 2 ದಿನ ವಸ್ತು ಪ್ರದರ್ಶನ ನಡೆಯಲಿದ್ದು, ಆರ್‌ಐಟಿನ 17 ವಿಭಾಗದ 1400 ವಿದ್ಯಾರ್ಥಿಗಳು ಆವಿಷ್ಕರಿಸಿರುವ ಒಟ್ಟು 430 ಪ್ರಾಜೆಕ್ಟ್‌ಗಳು ಪ್ರದರ್ಶನಗೊಳ್ಳಲಿವೆ.
ಸಮಾರಂಭದಲ್ಲಿ ಗೋಕುಲ ಎಜುಕೇಷನ್ ಫೌಂಡೇಶನ್ ಉಪಾಧ್ಯಕ್ಷ ಎಂ.ಆರ್. ಜಾನಕಿರಾಮ್, ಆರ್‌ಐಟಿ ನಿರ್ದೇಶಕರಾದ ಎಂ. ಆರ್.ಸಂಪಂಗಿ ರಾಮಯ್ಯ, ಎಂ.ಆರ್.ಕೋದಂಡ ರಾಮ್, ಪ್ರಾಂಶುಪಾಲ ಡಾ. ಎನ್.ವಿ.ಆರ್.ನಾಯ್ಡು, ಕಾರ್ಯಕಾರಿ ನಿರ್ದೇಶಕ ಡಾ. ಎಚ್. ವಿ. ಪಾಶ್ವನಾಥ ಇನ್ನಿತರರಿದ್ದರು.
"ಜೀವನದಲ್ಲಿ ಅತ್ಯಂತ ಬೆಲೆ ಬಾಳುವ ವಸ್ತು ಯಾವುದಾದರೂ ಇದ್ದರೆ ಅದು ಕೌಶಲ. ಅದನ್ನು ಯಾರು ಕದಿಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಣದ ಜೊತೆಗೆ ಕೌಶಲ ರೂಡಿಸಿಕೊಳ್ಳದಿದ್ದರೆ ವಿದ್ಯೆ ವ್ಯರ್ಥವಾಗುತ್ತದೆ. ಈ ರೀತಿಯ ಪ್ರಾಜೆಕ್ಟೃ್ಗಳು ವಿದ್ಯಾರ್ಥಿಗಳ ಸೃಜನಶೀಲತೆ ತೋರುತ್ತದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಶಿಕ್ಷಣಕ್ಕೂ ಅನುಕೂಲವಾಗಲಿದೆ."
-ಎಂ.ಆರ್. ಕೋದಂಡ ರಾಮ್, ನಿರ್ದೇಶಕ, ಆರ್‌ಐಟಿ