ಯೋಜನೆ ಹೆಸರಲ್ಲಿ ರಸ್ತೆ ಅಗೆತ

26 Jaggu 3
ವಡಗಾವಿ-ಶಹಾಪುರ ನಡುವಿನ ರಸ್ತೆ ಅಗೆದು ಹಾಗೆ ಬಿಟ್ಟಿರುವುದು.
Published on

ಬೆಳಗಾವಿ: ನಿರಂತರ ನೀರು ಸರಬರಾಜು (24್ಡ7) ವ್ಯವಸ್ಥೆ ಕಲ್ಪಿಸುವುದಕ್ಕೆ ನಗರದಲ್ಲಿ ರಸ್ತೆ ಅಗೆಯುತ್ತಿದ್ದು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆದಿದ್ದರಿಂದ ಹಳೇ ಬೆಳಗಾವಿ ಪ್ರದೇಶದ ರಸ್ತೆಗಳು ಹದಗೆಟ್ಟು ಹೋಗಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಒಳಚರಂಡಿ ಕಾಮಗಾರಿ ಹೆಸರಿನಲ್ಲಿ ರಸ್ತೆ ಅಗೆದು ಹಾಗೇ ಬಿಟ್ಟಿದ್ದು, ಮಳೆ ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಡಗಾವಿಯ ತೆಗ್ಗಿನ ಗಲ್ಲಿ, ಬಜಾರ್ ಗಲ್ಲಿ, ಸರ್ಾ ಗಲ್ಲಿ, ವಿಷ್ಣು ಗಲ್ಲಿ, ಶಹಾಪುರ ಮುಖ್ಯ ರಸ್ತೆಯಲ್ಲಿ ರಸ್ತೆ ಅಗೆದಿದ್ದರಿಂದ ತೊಂದರೆಯಾಗಿದೆ. ವಡಗಾವಿ ನಂ-14 ಶಾಲೆ ಪೈಪ್‌ಲೈನ್ ಹಾಕುವುದಕ್ಕೆ ರಸ್ತೆಗೆ ಹಾಕಿದ್ದ ಸಿಮೆಂಟ್ ಬ್ಲಾಕ್ ಕಿತ್ತಿದ್ದು, ಕಾಮಗಾರಿ ಪೂರ್ಣಗೊಳಿಸಿದರೂ ಸರಿಪಡಿಸಿಲ್ಲ. ಇದು ಮಕ್ಕಳಿಗೆ ತೊಂದರೆಯಾಗಿದೆ. ಶಹಾಪುರ ಪೈಪ್‌ಲೈನ್‌ಗೆ ರಸ್ತೆ ಅಗೆದಿದ್ದರಿಂದ ಸಿಮೆಂಟ್ ಬ್ಲಾಕ್‌ಗಳು ಮೇಲಿದ್ದಿದ್ದು, ಅವುಗಳನ್ನು ಸರಿಪಡಿಸಿಲ್ಲ.

ಬಹುತೇಕ ರಸ್ತೆಗಳು ಅವೈಜ್ಞಾನಿಕ: ವಡಗಾವಿಯ ದೇವಾಂಗ ನಗರ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣ ಹೆಸರಿನಲ್ಲಿ ಬೇಕಾಬಿಟ್ಟಿ ಕಾಮಗಾರಿ ಮಾಡಲಾಗಿದ್ದು, ಮಳೆಗಾಲಕ್ಕೆ ತೊಂದರೆಯಾಗುತ್ತಿದೆ. ವಡಗಾವಿ ಭಾಗದ ರಸ್ತೆ ಹಾಗೂ ಗಟಾರುಗಳು ಅವೈಜ್ಞಾನಿಕವಾಗಿವೆ. ಮಳೆ ನೀರು ಹರಿದು ಹೋಗುವ ರೀತಿಯಲ್ಲಿ ಕಾಮಗಾರಿ ಕೈಗೊಂಡಿಲ್ಲ. ರಸ್ತೆಗಳಲ್ಲಿ ಉಬ್ಬು-ಏರುಗಳಿವೆ. ಗಟಾರುಗಳು ಸಹಿತ ಸರಿಯಾಗಿ ನಿರ್ಮಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ವಡಗಾವಿಯ ಮಲಪ್ರಭಾ ನಗರ, ಕಲ್ಯಾಣ ನಗರ ಸೇರಿ ಈ ಭಾಗದ ಗಟಾರುಗಳನ್ನು ಸ್ವಚ್ಛಗೊಳಿಸಿಲ್ಲ. ಹೀಗಾಗಿ ಮಳೆಗಾಲದಲ್ಲಿ ಗಟಾರು ತುಂಬಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಪ್ರದೇಶ ಸೊಳ್ಳೆಗಳ ತಾಣವಾಗಿದ್ದು, ರೋಗಗಳ ಭೀತಿ ಹುಟ್ಟಿದೆ. ಮೂಲ ಸೌಲಭ್ಯಗಳ ಕೊರತೆಯಿಂದ ತೊಂದರೆಗೀಡಾಗುತ್ತಿದ್ದೇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಲಂ ನಗರ ಎಂದು ಹೆಸರುವಾಸಿ

‘ವಡಗಾವಿಯ ಮಲಪ್ರಭಾ ನಗರ’ ಕೊಳಚೆ ಪ್ರದೇಶವಾಗಿಯೇ ಉಳಿದಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣ, ಗಟಾರು, ಒಳಚರಂಡಿಯಿಂದಾಗಿ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆಯಾಗದಿದ್ದರೂ ಗಟಾರುಗಳಲ್ಲಿ ಕೊಳಚೆ ನೀರು ಸಂಗ್ರಹಗೊಂಡು ಗಬ್ಬು ವಾಸನೆ ಬರುತ್ತದೆ. ಗಟಾರು ನೀರು ನಾಲಾಗೆ ಹರಿದು ಹೋಗುವುದಿಲ್ಲ. ಹೀಗಾಗಿ ದಶಕದಿಂದಲೂ ಇದಕ್ಕೆ ಸ್ಲಂ ನಗರ ಎಂದು ಹೆಸರಿದೆ. ಮಲಪ್ರಭಾ ನಗರದ ನೀರು ನಾಲೆಗೆ ಹೋಗುವುದಿಲ್ಲ ಬದಲಾಗಿ ನಾಲೆಯ ನೀರು ಗಟಾರುಗಳಿಗೆ ನುಗ್ಗಿ ಕಲುಷಿತ ವಾತಾವರಣ ಸೃಷ್ಟಿಸುತ್ತಿದೆ.

ಅಕಾರಿಗಳ ವಿರುದ್ಧ ಆಕ್ರೋಶ

ವಡಗಾವಿ ದಾಮನೆ ರಸ್ತೆಯ ಬಳ್ಳಾರಿ ನಾಲಾ ಸೇತುವೆ ಕೆಳಗಿನ ಪೈಪ್‌ಲೈನ್ ಬ್ಲಾಕ್ ಆಗಿವೆ. ಇದರಿಂದ ನೇಕಾರ ಕಾಲನಿ, ಅನ್ನಪೂರ್ಣೇಶ್ವರಿ ನಗರ, ಆನಂದ ನಗರ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ಕೊಳಚೆ ನೀರು ನುಗ್ಗುತ್ತಿದೆ. ಕೆಲ ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸಂಬಂಸಿದ ಅಕಾರಿಗಳು ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವಡಗಾವಿ ದಾಮನೆ ರಸ್ತೆಯ ಬಳ್ಳಾರಿ ನಾಲಾ ಸೇತುವೆ ಕೆಳಗಿನ ಪೈಪ್‌ಲೈನ್ ಬ್ಲಾಕ್ ಆಗಿವೆ. ಇದರಿಂದ ವಡಗಾವಿ ಸುತ್ತಲಿನ ಪ್ರದೇಶಗಳಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದೆ. ಕಳೆದ ವರ್ಷವೂ ಇದೇ ಸಮಸ್ಯೆ ಇತ್ತು. ಆದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಈಗಲಾದರೂ ಸಮಸ್ಯೆ ಬಗೆಹರಿಸಬೇಕು. | ಶ್ರೀನಿವಾಸ ತಾಳೂಕರ ಕನ್ನಡಪರ ಸಂಘಟನೆ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net