ಮೇ 27ಕ್ಕೆ ಗೋಗಟೆ ಕಾಲೇಜಿನಲ್ಲಿ ಪ್ರಾಜೆಕ್ಟ್ ಮೇಳ

93f93c65de707471fccbd5e328ffa428.webp
Published on

ಬೆಳಗಾವಿ : ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಪ್ರಾಜೆಕ್ಟಗಳ ಪ್ರದರ್ಶನ, ಪ್ರಾಜೆಕ್ಟ್ ಎಕ್ಸ್‌ಪೋ-2023 ಅನ್ನು ಮೇ 27ರಂದು  ಆಯೋಜಿಸಲಾಗಿದೆ.
ಬೆಂಗಳೂರಿನ ಇಸ್ರೋ  ಉಪಗ್ರಹ ಕೇಂದ್ರದ ಕಂಟ್ರೋಲ್ ಡೈನಾಮಿಕ್ಸ್ ಮತ್ತು ಅನಾಲಿಸಿಸ್ ಉಪವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ವೆಂಕಟೇಶ್ವರಲು ಆಂಧ್ರ  ಉದ್ಘಾಟಿಸಲಿದ್ದಾರೆ. ಪ್ರಾಜೆಕ್ಟ್ ಎಕ್ಸ್‌ಪೋ-2023 ರಲ್ಲಿ ಒಟ್ಟು 250 ಕ್ಕೂ ಹೆಚ್ಚು ಹೊಸ ಪ್ರಾಜೆಕ್ಟ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಿಂದ  62, ಏರೋನಾಟಿಕಲ್ ಇಂಜಿನಿಯರ್‌ನಿಂದ 16, ಸಿವಿಲ್ ಎಂಜಿನಿಯರಿಂಗ್‌ನಿಂದ 35 , ಕಂಪ್ಯೂಟರ್ ಸೈನ್ಸ್‌ನಿಂದ 84, ಮೆಕ್ಯಾನಿಕಲ್ ವಿಭಾಗದಿಂದ 51, ಇನ್ಫಾರ್ಮಶನ್ ಸೈನ್ಸ್‌ನಿಂದ 25, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಿಂದ 16 ಮತ್ತು ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ  17 ಪ್ರಾಜೆಕ್ಟ ಗಳನ್ನು ವಿದ್ಯಾರ್ಥಿಗಳು ಈ ಮೇಳದಲ್ಲಿ ಪ್ರದರ್ಶಿಸಲಿದ್ದಾರೆ.
ಐಒಟಿ, ಪಿಎಲ್‌ಸಿ, ಇಂಧನ ಸಂರಕ್ಷಣೆ, ವಿದ್ಯುತ್ ವ್ಯವಸ್ಥೆಗಳು, ನೆಟ್‌ವರ್ಕಿಂಗ್, ಮಷೀನ್ ಲರ್ನಿಂಗ್, ವೆಬ್ ತಂತ್ರಜ್ಞಾನಗಳು, ಯಂತ್ರ ವಿನ್ಯಾಸ, ಉತ್ಪಾದನೆ, ಥರ್ಮಲ್ ಎಂಜಿನಿಯರಿಂಗ್, ತ್ಯಾಜ್ಯ ನಿರ್ವಹಣೆ, ಕೃಷಿ, ಸ್ಟ್ರಕ್ಚರಲ್ ಇಂಜಿನಿಯರಿಂಗ್, ನಿರ್ಮಾಣ ಸಾಮಗ್ರಿಗಳು ಮತ್ತು ನಿರ್ವಹಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾರಿಗೆ ಎಂಜಿನಿಯರಿಂಗ್, ನ್ಯಾನೋ ತಂತ್ರಜ್ಞಾನ, ಉಪಗ್ರಹ ಚಿತ್ರ ಸಂಸ್ಕರಣೆ ಮತ್ತು ಇನ್ನೂ ವಿವಿಧ ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಬಳಸಿ, ಅಭಿವೃದ್ಧಿಪಡಿಸಿದ ಈ ಎಲ್ಲ ಪ್ರಾಜೆಕ್ಟ್‌ಗಳ ಪ್ರದರ್ಶನ  ನಡೆಯಲಿದೆ. ಆಸಕ್ತರಿಗೆ ವೀಕ್ಷಣೆಗಾಗಿ ಪ್ರದರ್ಶನವು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ತೆರೆದಿರುತ್ತದೆ ಎಂದು ಕೆಎಲ್‌ಎಸ್ ಜಿಐಟಿಯ ಪ್ರಾಚಾರ್ಯ ಪ್ರೊ. ಡಿ.ಎ.ಕುಲಕರ್ಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net