ಹೊನ್ನಾಳಿಯಲ್ಲೇ ಕರ್ತವ್ಯ ಮುಂದುವರಿಕೆ

hullumani timmanna hnl
Published on

ಹೊನ್ನಾಳಿ: ಹೊನ್ನಾಳಿಯಿಂದ ವರ್ಗಾವಣೆಗೊಂಡಿದ್ದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಮೂರು ದಿನದಲ್ಲಿ ಮತ್ತೆ ಹೊನ್ನಾಳಿಯಲ್ಲೇ ಕರ್ತವ್ಯಕ್ಕೆ ಹಾಜರಾದರು.

ಉಪವಿಭಾಗಾಧಿಕಾರಿ ಸ್ಥಾನಕ್ಕೆ ಹಿರಿಯ ಶ್ರೇಣಿಯ ಉಪವಿಭಾಗಾಧಿಕಾರಿ ರೇಷ್ಮಾ ಹಾನಗಲ್ ಅವರು ಆ. 24ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಇಲ್ಲಿಂದ ವರ್ಗಾವಣೆಗೊಂಡಿದ್ದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ವರ್ಗಾವಣೆ ವಿರುದ್ಧ ಕರ್ನಾಟಕ ಆಡಳಿತ ನ್ಯಾಯಾಧೀಕರಣಕ್ಕೆ ಹೋಗಿ ವರ್ಗಾವಣೆ ಆದೇಶಕ್ಕೆ ಸೋಮವಾರವೇ ತಡಯಾಜ್ಞೆ ತಂದರು. ಆದೇಶ ಪ್ರತಿಯೊಂದಿಗೆ ಗುರುವಾರ ಕಚೇರಿಗೆ ಕರ್ತವ್ಯಕ್ಕೆ ಹಾಜರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net