ಮದ್ಯ ಮಾರಾಟ, ಸಾಗಾಣಿಕೆ ನಿಷೇಧ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೊಹರಂ ಹಬ್ಬದ ಆಚರಣೆ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜು. 16ರಿಂದ 19ರವರೆಗೆ ಮದ್ಯಪಾನ, ಮದ್ಯಮಾರಾಟ ಮತ್ತು ಮದ್ಯ ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜು. 16ರ ಸಂಜೆ 6 ಗಂಟೆಯಿಂದ ಜು. 18ರ ಬೆಳಗ್ಗೆ 6ರವರೆಗೆ ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಗ್ರಾಮೀಣ ತಾಲೂಕು (ಅರಳಿಕಟ್ಟೆ ಗ್ರಾಮ ಹೊರತು ಪಡಿಸಿ), ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕಲಘಟಗಿ ಮತ್ತು ಕುಂದಗೋಳ (ಯರಗುಪ್ಪಿ, ಯರಿನಾರಾಯಣಪುರ, ಚಿಕ್ಕನರ್ತಿ, ಮುಳ್ಳೊಳ್ಳಿ, ಪಶುಪತಿಹಾಳ ಗ್ರಾಮಗಳನ್ನು ಹೊರತುಪಡಿಸಿ) ತಾಲೂಕು ಮತ್ತು ಜು. 17ರ ಸಂಜೆ 6 ಗಂಟೆಯಿಂದ ಜು. 19ರ ಬೆಳಗ್ಗೆ 6ರವರೆಗೆ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅರಳಿಕಟ್ಟಿ ಗ್ರಾಮ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ, ಯರಿನಾರಾಯಣಪು, ಚಿಕ್ಕನರ್ತಿ, ಮುಳ್ಳೊಳ್ಳಿ, ಪಶುಪತಿಹಾಳ ಗ್ರಾಮಗಳಲ್ಲಿ ಮದ್ಯಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net