ಕಾವೇರಿ ನದಿಯಲ್ಲಿ ಮೂರ್ತಿ ವಿಸರ್ಜನೆಗೆ ನಿಷೇಧಾಜ್ಞೆ

Published on

ಶ್ರೀರಂಗಪಟ್ಟಣ: ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನ ಹೊರವಲಯದ ತ್ರಿವೇಣಿ ಸಂಗಮದ ಕಾವೇರಿ ನದಿಯಲ್ಲಿ ಯಾವುದೇ ತರಹದ ಗಣಪತಿ ಮೂರ್ತಿಗಳನ್ನು ವಿಸರ್ಜನೆ ನಡೆಸದಂತೆ ತಾಲೂಕು ಆಡಳಿತ ನಿಷೇಧಾಜ್ಞೆ ಹೊರಡಿಸಿ ಆದೇಶ ಜಾರಿಗೊಳಿಸಿದೆ.

ಸೆ.7ರಿಂದ ಸೆ.21ರವರೆಗೆ ಈ ನಿಯಮ ಜಾರಿಯಲ್ಲಿದ್ದು, ಇಲ್ಲಿನ ಕಾವೇರಿ ನದಿಯು ಅತ್ಯಂತ ಅಪಾಯಕಾರಿ ಸ್ಥಳವಾದ ಕಾರಣ ಯಾರೂ ಸಹ ನದಿಗೆ ಇಳಿಯದಂತೆ ಮುಂಜಾಗ್ರತೆ ವಹಿಸಿ ಕಳೆದ 2012ರಿಂದ ನಡೆದು ಬಂದ ನಿಯಮಾನುಸಾರ ಈ ಆದೇಶವನ್ನು ಜಾರಿಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net