ಎರಡು ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾ ಜಾರಿ

vijayavani logo
Award ceremony, official ceremony tomorrow
Published on

ವಿಜಯಪುರ: ಕರ್ನಾಟಕ ಶಾಲಾ ಪರೀೆ ಹಾಗೂ ಮೌಲ್ಯ ರ್ನಿಣಯ ಮಂಡಳಿ ನಡೆಸುವ ಗಣಕಯಂತ್ರ ಪ್ರವೇಶ ಪರೀೆಗಳು ಇಲ್ಲಿನ ನೀಲಕಂಠೇಶ್ವರ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಅಲ್​&ಅಮೀನ್​ ಮೆಡಿಕಲ್​ ಕಾಲೇಜಿನ ಪರೀಾ ಕೇಂದ್ರಗಳಲ್ಲಿ ಫೆ.3 ರಿಂದ ಫೆ.10 ರವರೆಗೆ ನಡೆಯಲಿವೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಪರೀಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ನಿಷೇಧಾೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಟಿ. ಭೂಬಾಲನ್​ ಆದೇಶ ಹೊರಡಿಸಿದ್ದಾರೆ.

ಪರೀಾ ದಿನದಂದು ಪರೀೆಯಲ್ಲಿ ತೊಡಗಿದ ಯಾವುದೇ ಅಧಿಕಾರಿ, ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಮೊಬೈಲ್​ ಫೋನ್​, ಸ್ಮಾರ್ಟ್​ವಾಚ್​, ಬ್ಲೂಟೂತ್​ ಡಿವೈಸ್​, ಪೇಜರ್​, ವೈರ್​ಲೆಸ್​, ಕ್ಯಾಲ್ಕುಲೇಟರ್​ ಸೇರಿ ಮುಂತಾದ ಎಲೆಕ್ಟ್ರಾನಿಕ್​ ವಸ್ತುಗಳನ್ನು ತರುವುದು ಹಾಗೂ ಬಳಸುವುದನ್ನು ನಿಷೇಧಿಸಿದೆ.

ಅಲ್ಲದೆ, ಪರೀಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ಪರೀಕ್ಷೆ ನಡೆಯುವ ಸಮಯದಲ್ಲಿ ಜೆರಾಕ್ಸ್​, ಕಂಪ್ಯೂಟರ್​ ಸೆಂಟರ್​, ಇಂರ್ಟನೆಟ್​, ಸೈಬರ್​ ಕೆಫೆಗಳು ಹಾಗೂ ಕೋಚಿಂಗ್​ ಕೇಂದ್ರಗಳನ್ನು ತೆರೆಯದಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net