ಇಂದಿನಿಂದ ನಿಷೇಧಾಜ್ಞೆ ಜಾರಿ

GADAG DC SUNDARESH BAABU
Published on

ಗದಗ: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ತಿಳಿಸಿದ್ದಾರೆ.

ಮೊದಲನೇ ಹಂತದಲ್ಲಿ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಗ್ರಾಪಂಗಳಿಗೆ ಡಿ. 22ರಂದು, ಎರಡನೇ ಹಂತದಲ್ಲಿ ನರಗುಂದ, ರೋಣ, ಗಜೇಂದ್ರಗಡ, ಮುಂಡರಗಿ ತಾಲೂಕಿನ ಗ್ರಾಪಂಗಳಿಗೆ ಡಿ. 27ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಮತದಾನ ನಡೆಯುವ ಗ್ರಾಪಂಗಳಲ್ಲಿ ಡಿ. 20ರಂದು ಸಂಜೆ 5ರಿಂದ ಡಿ. 22ರ ಮಧ್ಯರಾತ್ರಿವರೆಗೆ ಹಾಗೂ ಎರಡನೇ ಹಂತದಲ್ಲಿ ಮತದಾನ ನಡೆಯುವ ಗ್ರಾಪಂಗಳಲ್ಲಿ ಡಿ. 25ರಂದು ಸಂಜೆ 5ರಿಂದ ಡಿ. 27ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಮೆರವಣಿಗೆ, ಸಭೆ-ಸಮಾರಂಭ, ಮಾರಕಾಸ್ತ್ರ ಒಯ್ಯುವುದು, ತಿರುಗಾಡುವುದು, ಜೆರಾಕ್ಸ್, ಬುಕ್​ಸ್ಟಾಲ್, ಫೋಟೋ ಕಾಪಿಯರ್ ಅಂಗಡಿಗಳನ್ನು ಸ್ಥಗಿತಗೊಳಿಸಬೇಕು. ಮತಗಟ್ಟೆಗಳ ಸುತ್ತ 200 ಮೀ. ಒಳಗೆ ಪ್ರಚಾರ, ಕಲ್ಲುಗಳು, ಸ್ಪೋಟಕ ವಸ್ತುಗಳ ಸಂಗ್ರಹ, ಬಹಿರಂಗ ಘೊಷಣೆ, ಹಾಡುವುದು, ವಾದ್ಯ ಬಾರಿಸುವುದು, ಮೊಬೈಲ್​ಫೋನ್, ಕಾರ್ಡ್​ಲೆಸ್ ಫೋನ್ ಮತ್ತಿತರ ಇಲೆಕ್ಟ್ರಾನಿಕ್ಸ್ ಉಪಕರಣ ಒಯ್ಯುವುದು, ಪ್ರಚಾರದ ಪೋಸ್ಟರ್, ಬ್ಯಾನರ್, ವಾಹನಗಳು, ಧ್ವನಿವರ್ಧಕಗಳ ಬಳಕೆ, ವ್ಯಾಖ್ಯಾನ, ಮನುಷ್ಯ ಶವಗಳ, ಆಕೃತಿ, ಪ್ರತಿಮೆಗಳು, ಸನ್ನೆ ಅಥವಾ ನಕಲಿ ಪ್ರದರ್ಶನ, ಸಾರ್ವಜನಿಕವಾಗಿ ಪ್ರಚೋದನಾತ್ಮಕ, ಉದ್ರೇಕಕಾರಿ ಹಾಡುಗಳು, ಕೂಗಾಟ, ವ್ಯಕ್ತಿಗಳ ತೇಜೋವಧೆಯಂಥ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳ ಪ್ರದರ್ಶನ ಅಥವಾ ಕಾನೂನು -ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಭ್ಯರ್ಥಿಗಳು, ಬೆಂಬಲಿಗರು ಮನೆ-ಮನೆಗೆ ತೆರಳಿ ಮತಯಾಚಿಸಬಹುದು. ಶವ ಸಂಸ್ಕಾರ, ಮದುವೆ, ಧಾರ್ವಿುಕ ಕಾರ್ಯಕ್ರಮಗಳ ಮೆರವಣಿಗೆ, ಕೋವಿಡ್ ಕಾರ್ಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net