ಪ್ರಗತಿಯ ಹರಿಕಾರ ದಿ.ಸುರೇಶ ಅಂಗಡಿ

19 Jaggu 17-Web
ರಾಮತೀರ್ಥ ನಗರದಲ್ಲಿ ಇತ್ತೀಚೆಗೆ ಸುರೇಶ ಅಂಗಡಿ ಅಭಿಮಾನಿ ಬಳಗದಿಂದ ಸ್ವರ-ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಚಿವ ಜಗದೀಶ ಶೆಟ್ಟರ್, ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಇತರರಿದ್ದರು.
Published on

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಹತ್ತು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯದ ವಿವಿಧ ರೈಲ್ವೆ ಯೋಜನೆ ಸೇರಿ ಅನೇಕ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ಸ್ಮರಿಸಿದ್ದಾರೆ.

ಇಲ್ಲಿನ ರಾಮತೀರ್ಥ ನಗರದ ಶಿವಾಲಯದ ಪಕ್ಕದ ಉದ್ಯಾನದಲ್ಲಿ ಸುರೇಶ ಅಂಗಡಿ ಅಭಿಮಾನಿಗಳ ಬಳಗದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವರ-ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರ ಕಾಯಕವೇ ಕೈಲಾಸವೆಂಬ ನುಡಿಯಂತೆ ನಿತ್ಯ ಜೀವನದಲ್ಲಿ ನಡೆದುಕೊಂಡ ಅಂಗಡಿಯವರು, ಎಲ್ಲರೊಳಗೊಂದಾಗಿ ಬದುಕಿದವರು. ಅವರು ಕಂಡ ಕನಸುಗಳು ನಮ್ಮ ಮುಂದಿವೆ. ಆ ಕನಸುಗಳಲ್ಲಿ ಅಂಗಡಿಯವರನ್ನು ಕಾಣುತ್ತ ನನಸು ಮಾಡೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ದಿ.ಸುರೇಶ ಅಂಗಡಿ ಅವರ ಕಾರ್ಯವನ್ನು ಸ್ಮರಿಸಿದರು. ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಬಿ.ಝಿರಲಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಮಾಜಿ ಶಾಸಕ ಸಂಜಯ ಪಾಟೀಲ, ಜಗದೀಶ ಪಾಟೀಲ ಮತ್ತಿತರರಿದ್ದರು.

ಬಳಿಕ ಜ್ಯೂ. ಶಿವರಾಜಕುಮಾರ ಹಾಗೂ ತಂಡದವರು ಅಂಗಡಿಯವರ ಕುರಿತಾದ ಹಾಡು ಹಾಡಿ ಗಮನ ಸೆಳೆದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಮುಖರಾದ ರಾಘವೇಂದ್ರ ಕಾಗವಾಡಜಿ, ಅಶೋಕ ಶಿಂಥ್ರೆ, ಸುರೇಶ ಅಂಗಡಿ ಅಭಿಮಾನಿ ಬಳಗದ ಅಧ್ಯಕ್ಷ ಸುರೇಶ ಯಾದವ, ರಾಜು ಚಿಕ್ಕನಗೌಡರ, ಎಸ್.ಎಸ್.ಕಿವಡಸಣ್ಣವರ, ಎನ್.ಬಿ. ನಿರ್ವಾಣಿ, ಶ್ರದ್ಧಾ ಶೆಟ್ಟರ್, ಸಂಕಲ್ಪ ಶೆಟ್ಟರ್, ದಿಗ್ವಿಜಯ ಸಿದ್ನಾಳ, ಗುರುದೇವ ಪಾಟೀಲ, ವಿಲಾಸ ಕೇರೂರ, ಸುರೇಶ ನಾಯರಿ, ಬಿದ್ನಾಳ, ಮದವಾಲ, ವಜ್ರಕಾಂತ ಸಾಲಿಮಠ ಇತರರಿದ್ದರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರಹುಸೇನ್ ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net