ಪ್ರಗತಿಪಥದತ್ತ ಬಸವ ಸೌಹಾರ್ದ ಸಹಕಾರಿ

web4
ಬೈಲಹೊಂಗಲ ಪಟ್ಟಣದ ವಿಜಯ ಸೋಷಿಯಲ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಬಸವ ಸೌಹಾರ್ದ ಸಹಕಾರಿ ವಾರ್ಷಿಕ ಸಭೆಯನ್ನು ಪ್ರಭುನೀಲಕಂಠ ಸ್ವಾಮೀಜಿ ಉದ್ಘಾಟಿಸಿದರು. ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ, ವಿಜಯ ಮೆಟಗುಡ್ಡ ಇತರರಿದ್ದರು.
Published on

ಬೈಲಹೊಂಗಲ: ಬಸವ ಸೌಹಾರ್ದ ಅಲ್ಪಾವಧಿಯಲ್ಲಿಯೇ 80.10 ಲಕ್ಷ ರೂ. ಲಾಭಗಳಿಸಿರುವ ಸಹಕಾರಿ ಹೆಮ್ಮರವಾಗಿ ಬೆಳೆದಿದೆ ಎಂದು ಮೂರುಸಾವಿರಮಠದ ಪೀಠಾಧಿಕಾರಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದ ವಿಜಯ ಸೋಷಿಯಲ್ ಕ್ಲಬ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಬಸವ ಸೌಹಾರ್ದ ಕ್ರೆಡಿಟ್ ಸಹಕಾರಿ 10ನೇ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಸ್ಥಾಪಕ ವಿಜಯ ಮೆಟಗುಡ್ಡ ಅವರು ಸ್ಥಾಪಿಸುತ್ತಿರುವ ಉದ್ಯಮ, ಸಹಕಾರಿಗಳು ಜನರಿಗೆ ಆಶಾಕಿರಣವಾಗಿವೆ ಎಂದರು.

ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ ಮಾತನಾಡಿ, ವಿಜಯ ಮೆಟಗುಡ್ಡ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಸಹಕಾರಿ ಸಂಸ್ಥಾಪಕ ವಿಜಯ ಮೆಟಗುಡ್ಡ ಮಾತನಾಡಿ, 2,367 ಸದಸ್ಯರನ್ನು ಹೊಂದಿದ್ದು, 1.75 ಕೋಟಿ ರೂ. ಷೇರು ಸಂಗ್ರಹಿಸಿ, 5.46 ಕೋಟಿ ರೂ. ನಿಧಿ ಹೊಂದಿದೆ. 36.41 ಕೋಟಿ ರೂ. ಠೇವುಗಳೊಂದಿಗೆ 35.75 ಕೋಟಿ ರೂ. ಸಾಲ ವಿತರಿಸಿದೆ. 44.43 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 8.10 ಲಕ್ಷ ರೂ. ಲಾಭ ಗಳಿಸಿದೆ ಎಂದರು.
ಚಿತ್ರನಟ ಶಿವರಂಜನ ಬೋಳಣ್ಣವರ, ಅಧ್ಯಕ್ಷ ಶಿವಾನಂದ ಬಡ್ಡಿಮನಿ, ಚಾರ್ಟಡ್ ಅಕೌಂಟೆಂಟ್ ಸುರೇಶ ಉಡುಪಿ ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ಸಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಮಾಜಿ ಅಧ್ಯಕ್ಷ ಮಹಾಂತೇಶ ತಟವಾಟಿ, ನಿರ್ದೇಶಕರಾದ ಪ್ರುಲ್ ಪಾಟೀಲ, ಅನಿಲಕುಮಾರ ಇಂಚಲ, ಶಂಭುಲಿಂಗ ಹೂಲಿ, ದುಂಡಯ್ಯ ಸುಂಕದ, ಬಸವರಾಜ ತಳವಾರ, ಮಹಾಂತೇಶ ಜಿಗಜಿನ್ನಿ, ಉಮೇಶ ಬೋಳಣ್ಣವರ, ರವಿಚಂದ್ರ ಹೊಸೂರ, ಶಿವಲೀಲಾ ಸಾಲಿಮಠ, ಪ್ರೀತಿ ಬೆಲ್ಲದ, ಸಂತೋಷ ರಾಯರ, ಪ್ರಭು ಗುಂಡ್ಲೂರ, ನಾಗರಾಜ ಮುರಗೋಡ, ಕುಮಾರ ಬೋರಕನವರ ಇತರರಿದ್ದರು. ಮುಖ್ಯಕಾರ್ಯನಿರ್ವಾಹಕ ಬಸವರಾಜ ನಂಜನ್ನವರ ವಾರ್ಷಿಕ ವರದಿ ಓದಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net