

ರಟ್ಟಿಹಳ್ಳಿ: ಪಟ್ಟಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಸಮಿತಿ ತಾಲೂಕು ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ ಅಧ್ಯಕ್ಷತೆ, ಶಾಸಕ ಯು.ಬಿ. ಬಣಕಾರ ಸಮ್ಮುಖದಲ್ಲಿ ಸೋಮವಾರ ನಡೆಯಿತು.
ಜಿಲ್ಲಾ ಉದ್ಯೋಗಾಧಿಕಾರಿ ಚೇತನಕುಮಾರ ಮೋಹಿತೆ ಮಾಹಿತಿ ನೀಡಿ, ಯುವನಿಧಿ ಯೋಜನೆಯಡಿ ಈವರೆಗೆ 484 ಲಾನುಭವಿಗಳು ನೋಂದಣಿಯಾಗಿದ್ದು, ಇದರಲ್ಲಿ 398 ಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲಾಗಿದೆ. ಪದವೀಧರರಿಗೆ 73.26 ಲಕ್ಷ ರೂ. ಹಾಗೂ ಡಿಪ್ಲೊಮಾದವರಿಗೆ 73.56 ಲಕ್ಷ ರೂಪಾಯಿ ಪಾವತಿಸಲಾಗಿದೆ ಎಂದರು.
ಹಿರೇಕೆರೂರು ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ ಮಾತನಾಡಿ, ಹಿರೇಕೆರೂರು ಘಟಕದಿಂದ ಜೂನ್ 2023ರಿಂದ ಜುಲೈ 2025 ರವರೆಗೆ 21 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದರು.
ಸಮಿತಿ ಸದಸ್ಯ ಬೀರೇಶ ಕರಡಣ್ಣನವರ ಅವರು, ಕಣವಿಸಿದ್ಗೇರಿ ಸೇರಿದಂತೆ ಕೆಲವು ಗ್ರಾಮದ ಶಾಲೆಯ ಮಕ್ಕಳಿಗೆ ರಟ್ಟಿಹಳ್ಳಿ ಪಟ್ಟಣದಿಂದ ಸಂಜೆ ವೇಳೆ ಗ್ರಾಮಗಳಿಗೆ ತೆರಳಲು ಬಸ್ ಸಮಯ ಪರಿಶೀಲನೆ ಮಾಡುವಂತೆ ಹಾಗೂ ಮಂಜುನಾಥ ಅಸ್ವಾಲಿ ಅವರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಬಸ್‌ಗಳಿಗೆ ನಿಲುಗಡೆ ಮಾಡುವಂತೆ ಮನವಿ ಮಾಡಿದರು.
ಗೃಹಲಕ್ಷ್ಮಿಪ್ರಗತಿ ಕುರಿತು ಸಿಡಿಪಿಒ ಕಚೇರಿಯ ಗೀತಾ ಬಾಳಿಕಾಯಿ, ಗೃಹಜ್ಯೋತಿ ಪ್ರಗತಿ ಕುರಿತು ಹೆಸ್ಕಾಂ ಇಂಜಿನಿಯರ್ ರಾಜೀವ ಮರಿಗೌಡ್ರ, ಅನ್ನಭಾಗ್ಯ ಯೋಜನೆ ಕುರಿತು ಆಹಾರ ನಿರೀಕ್ಷಕ ಚಂದ್ರಶೇಖರ ಹೆದ್ದಳ್ಳಿ ಮಾಹಿತಿ ನೀಡಿದರು.
ತಾಪಂ ಇಒ ಎನ್.ರವಿ, ಸಮಿತಿ ಸದಸ್ಯರು ಇದ್ದರು.