

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಿಯಮಾನುಸಾರ ಜರುಗಬೇಕು. ಸಹಾಯಕ ಚುನಾವಣಾಽಕಾರಿಗಳು ಮತದಾರ ಪಟ್ಟಿ ಪರಿಷ್ಕರಣೆಯ ಮೇಲುಸ್ತುವಾರಿ ವಹಿಸಿ ಪರಿಶೀಲಿಸಬೇಕು. ಅರ್ಜಿ ನಮೂನೆ 8ರ ಅನುಸಾರ ಮತದಾರರ ಹೆಸರು, ಅಡ್ಡಹೆಸರು, ವಯಸ್ಸು ದಾಖಲಿಸಬೇಕು ಎಂದು ಜಿಲ್ಲೆಯ ಮತದಾರ ಪಟ್ಟಿ ಪರಿಷ್ಕರಣೆ ವೀಕ್ಷಕ, ಬೆಂಗಳೂರು ಅಭಿವೃದ್ಧಿ ಪ್ರಾಽಕಾರದ ಆಯುಕ್ತ ಎನ್. ಜಯರಾಂ ಸೂಚಿಸಿದರು.
ನಗರದ ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಉತ್ತಮವಾಗಿದೆ. ಅಂತಿಮ ಮತದಾರ ಪಟ್ಟಿ ಪ್ರಕಟಿಸುವ ಮೊದಲು ಮತದಾರ ನೋಂದಣಿ ಅಽಕಾರಿಗಳು, ಸಹಾಯಕ ಮತದಾರ ನೋಂದಣಿ ಅಽಕಾರಿಗಳು ಮರು ಪರಿಶೀಲಿಸಬೇಕು ಎಂದರು.
ಜಿಲ್ಲಾಽಕಾರಿ ದಿವ್ಯ ಪ್ರಭು, ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ., ಮತದಾರ ನೋಂದಣಿ ಅಽಕಾರಿಗಳಾದ ಶಾಲಂ ಹುಸೇನ್, ಡಾ. ಈಶ್ವರ ಉಳ್ಳಾಗಡ್ಡಿ, ಸಹಾಯಕ ಮತದಾರ ನೋಂದಣಿ ಅಽಕಾರಿ ಡಾ. ದೊಡ್ಡಪ್ಪ ಹೂಗಾರ, ಇತರರಿದ್ದರು.