ಪ್ರಗತಿಪರ ರೈತರನ್ನಾಗಿಸಲು ಯೋಜನೆ

30-SanduruP3
ತೋರಣಗಲ್‌ನಲ್ಲಿ ಜೆಎಸ್‌ಡಬ್ಲುೃ ಫೌಂಡೇಷನ್‌ನಿಂದ ಸಿಎಸ್‌ಆರ್ ಅಡಿ ರೈತರಿಗೆ ಕೋಳಿ ಮರಿಗಳನ್ನು ವಿತರಿಸಲಾಯಿತು. ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಕೃಷಿ ವಿಜ್ಞಾನಿ ಡಾ.ಪಾಲಯ್ಯ ಇತರರಿದ್ದರು.
Published on

ಸಂಡೂರು: ಸಿಎಸ್‌ಆರ್ ಅಡಿಯಲ್ಲಿ ಜೆಎಸ್‌ಡಬ್ಲುೃ ಫೌಂಡೇಷನ್, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಬಳ್ಳಾರಿಯ ಹಗರಿ ಕೃಷಿವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸಮಗ್ರ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪಾಲಯ್ಯ ಹೇಳಿದರು.

ತೋರಣಗಲ್‌ನ ಒಪಿಜೆ ಕೇಂದ್ರದಲ್ಲಿ ಶುಕ್ರವಾರ ಕೃಷಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ 50 ಜನರನ್ನು ಪ್ರಗತಿಪರ ರೈತರನ್ನಾಗಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕೃಷಿ ಉಪಕಸುಬಾದ ದೇಸಿ ಗಿರಿರಾಜ ತಳಿಯ ಕೋಳಿಗಳನ್ನು ನೀಡಲಾಗುತ್ತಿದೆ.

ಪ್ರಾಯೋಗಿಕವಾಗಿ 20 ರೈತರಿಗೆ 450ಕ್ಕೂ ಹೆಚ್ಚು ಕೋಳಿ ಮರಿಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗಿದೆ ಎಂದರು. ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿದರು. ಹಗರಿ ಕೃಷಿ ವಿಜ್ಞಾನ ಕೇಂದ್ರದ ಡಾ.ರವಿ, ಜೆಎಸ್‌ಡಬ್ಲುೃ ಫೌಂಡೇಷನ್ ಕೃಷಿ ವಿಭಾಗದ ಸಂಯೋಜಕ ನಾಗನಗೌಡ ಮತ್ತು ಗಣೇಶ್ ಹಾಗೂ 30ಕ್ಕೂ ಅಧಿಕ ಪ್ರಗತಿಪರ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net