

ಕಾರ್ಕಳ: ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಪ್ರತಿ ಕ್ಷಣವೂ ಕೂಡ ಅಮೂಲ್ಯವಾದದ್ದು, ಋಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕವಾಗಿ ಆಲೋಚಿಸಿದಾಗ ನಮ್ಮ ಪ್ರಗತಿ ಸಾಧ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಹಾಗೂ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನುರಾಧಾ ಕುರುಂಜಿ ಹೇಳಿದರು.
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ಸ್ಫೂರ್ತಿ ವಾತು- 11’ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್, ಸಹ ಸಂಸ್ಥಾಪಕ ಆದರ್ಶ ಎಂ.ಕೆ. ಮತ್ತು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಕೃತ ಉಪನ್ಯಾಸಕಿ ಡಾ.ಸೌಂದರ್ಯಲಕ್ಷ್ಮೀ ನಿರೂಪಿಸಿದರು.