

ಮೈಸೂರು: ಕಲಿಕೆಯ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆ ಪ್ರತಿ ಕಾಲೇಜು ಆದ್ಯತೆ ಕೊಡಬೇಕು ಎಂದು ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ ಹೇಳಿದರು.
ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಸಾಹಿತ್ಯ ಸಂಭ್ರಮ-2024 ಕನ್ನಡ ಸಾಹಿತ್ಯ ಮತ್ತು ವರ್ತಮಾನ ವಿಚಾರ ಸಂಕಿರಣ, ವಿದ್ಯಾರ್ಥಿನಿಯರಿಂದ ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನೋತ್ಸಾಹದಿಂದ ಮಾತ್ರ ಬದುಕಿನಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಹಾಗೆಯೇ ಪೂರಕವಾಗಿ ಕಾಲೇಜುಗಳು ಕಲಿಕೆಯ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಗೆ ಪ್ರತಿ ಕಾಲೇಜುಗಳು ಆದ್ಯತೆ ನೀಡಿ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕಿದೆ ಎಂದರು.
ಇತರೆ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಸಾಹಿತ್ಯದ ವಿದ್ಯಾರ್ಥಿಗಳು ವಿಶೇಷ ಗುಣ ಹೊಂದಿರುತ್ತಾರೆ. ಸಾಹಿತ್ಯವು ವಿಭಿನ್ನ ದೃಷ್ಟಿಕೋನ ಹೊಂದಿದ್ದು, ವಿಶಿಷ್ಟ ಅಭಿರುಚಿಯನ್ನು ಬೆಳೆಸುತ್ತದೆ. ಭಾರತೀಯ ಭಾಷೆಗಳ ಅಧ್ಯಯನವು ಸಾಹಿತ್ಯ ವಿದ್ಯಾರ್ಥಿಗಳಿಗೆ ಮುಖ್ಯವಾಗಿದೆ. ಜಾಗತಿಕ ಸಾಹಿತ್ಯ ಅಧ್ಯಯನದ ಕಡೆಗೂ ಗಮನ ಕೊಡಬೇಕು ಎಂದು ತಿಳಿಸಿದರು.
ಜಾಗತಿಕ ಸಾಹಿತ್ಯ ಅರಿತುಕೊಳ್ಳಿ:
ಸಾಹಿತ್ಯವು ತಮ್ಮ ಅಭಿವ್ಯಕ್ತಿಗೆ ಕಾರಣವಾಗಲಿದೆ. ಯಾವುದೇ ಸಾಹಿತ್ಯವನ್ನು ಅಧ್ಯಯನ ಮಾಡಿದಾಗ ವರ್ತಮಾನಕ್ಕೆ ಅನುಸಂಧಾನಗೊಳಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಸಂವಹನ ಕೌಶಲವು ಬಹಳ ವ ುುಖ್ಯವಾಗಿದೆ. ಆ ಮೂಲಕ ಜಾಗತಿಕ ಸಾಹಿತ್ಯವನ್ನು ಅರಿತುಕೊಳ್ಳಲು ಸಾಧ್ಯ ಎಂದರು.
ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಕಾಲೇಜಿನ ಪ್ರಾಂಶುಪಾಲೆ ಡಾ. ಎಂ.ಶಾರದಾ, ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದ ಮೂರ್ತಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಎಂ.ಎಸ್.ಸಂಧ್ಯಾರಾಣಿ ಇದ್ದರು.