ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉನ್ನತಿ

udp
Published on

ಉಡುಪಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತಿ ಸಾಧಿಸಬಹುದು ಎಂದು ಎನ್‌ಸಿಸಿ ನೇವಲ್ ಕವಾಂಡರ್ ಅಶ್ವಿನ್ ಎಂ.ರಾವ್ ಹೇಳಿದರು.

ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ಎನ್‌ಸಿಸಿ ನೇವಲ್ ಟಕ ಉದ್ಘಾಟಿಸಿ ಮಾತನಾಡಿ, ಸಂಟನೆ ಮತ್ತು ಶಿಸ್ತು ಎನ್‌ಸಿಸಿ ಮುಖ್ಯ ಧ್ಯೇಯ. ಎನ್‌ಸಿಸಿ ಸೇರುವುದರಿಂದ ದೇಶದ ಉತ್ತಮ ನಾಗರಿಕರಾಗಲು ಸಾಧ್ಯ ಎಂದರು.

ಕೃಷಿ ಅರ್ಥಶಾಸಜ್ಞ ಡಾ.ಎನ್.ಎಸ್.ಶೆಟ್ಟಿ ವಾತನಾಡಿ, ಎನ್‌ಸಿಸಿ ಟಕ ಆರಂಭವಾಗಿರುವುದು ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚು ಶಿಸ್ತು ಮೂಡಿಸಲು , ದೇಶಾಭಿವಾನ ಬೆಳೆಸಲು ಅನುಕೂಲಕರವಾಗಲಿದೆ ಎಂದರು.

ನೇವಲ್ ಕವಾಂಡರ್ ಎಂ.ಎ.ಮುಲ್ತಾನಿ ಮತ್ತು ಪಿ.ಐ.ಸ್ಟಾಪ್ ಅನಿಲ್ ದಾಸ್ ಮುಖ್ಯ ಅತಿಥಿಗಳಾಗಿದ್ದರು. ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ, ಸೈನಿಕ ಹರಿಕೃಷ್ಣ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ್, ಸದಸ್ಯರಾದ ಅಶೋಕ್ ಜೋಗಿ, ಮುರಳಿಧರ ಹಾಲಂಬಿ, ನಿತ್ಯಾನಂದ ನಾಯಕ್, ವಿಜಯಶೆಟ್ಟಿ, ಜ್ಯೋತಿ ಪ್ರಭು, ದೇವರಾಜ್ ಶಾಸಿ, ಲಕ್ಷ್ಮೀ ಶೆಟ್ಟಿಗಾರ್, ನಿಷಿತಾ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ಅಧ್ಯಾಪಕ ವಿಜಯ್ ಕುವಾರ್ ಸ್ವಾಗತಿಸಿದರು. ಉಪನ್ಯಾಸಕ ಮಹೇಶ್ ಕೊಟಾರಿ ವಂದಿಸಿದರು. ಅಧ್ಯಾಪಕ ರವೀಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net