ಪಾಲಕರ ಪ್ರೋತ್ಸಾಹದಿಂದ ಕಲಿಕೆಯಲ್ಲಿ ಪ್ರಗತಿ ಸಾಧ್ಯ

Oplus_131072
05 ವೈಎಲ್‌ಡಿ ಚಿತ್ರ 02 ಯಳಂದೂರು ತಾಲೂಕಿನ ಗುಂಬಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮರಯ್ಯ ಉದ್ಘಾಟಿಸಿದರು. ಬಿಆರ್‌ಸಿ ನಂಜುಂಡಯ್ಯ, ಸಿಆರ್‌ಪಿ ಯರಿಯೂರು ರೇಚಣ್ಣ ಇತರರು ಇದ್ದರು.
Published on

ಯಳಂದೂರು: ಕಲಿಕಾಹಬ್ಬ ಕಾರ್ಯಕ್ರಮಕ್ಕೆ ಪಾಲಕರು ಪ್ರೋತ್ಸಾಹ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಯ್ಯ ಹೇಳಿದರು.

ಗುಂಬಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಇತ್ತೀಚೆಗೆ ಹೊಂಬಾಳೆ ಬಿಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಕ್ಕಳು ಕಥೆ ಹೇಳುವುದು, ರಸಪ್ರಶ್ನೆ, ಗಟ್ಟಿ ಓದು, ಕೈ ಬರಹ, ಕ್ಯಾಲಿಗ್ರಫಿ, ಸಂತೋಷದಾಯಕ ಗಣಿತ, ಪಾಲಕರು ಮತ್ತು ಮಕ್ಕಳ ಸಹ ಸಂಬಂಧ ಹಾಗೂ ಇತರ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಇಂಥ ಚಟುವಟಿಕೆಗಳಿಂದ ಮಕ್ಕಳ ಮನಸ್ಸಿನ ಒಳಹೊಕ್ಕು ಅವರಿಗೆ ಅರಿವಾಗುವ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಂಜುಂಡಯ್ಯ ಮಾತನಾಡಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಾಡಿರುವ ಕಲಿಕಾ ಚಪ್ಪರ, ವಿವಿಧ ಕಲಿಕಾ ಸಾಮಗ್ರಿಗಳು ಕಲಿಕೆ ಪರಿಣಾಮಕಾರಿಯಾಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಸಿಆರ್‌ಪಿ ಯರಿಯೂರು ರೇಚಣ್ಣ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ನಿಂಗರಾಜು, ಸದಸ್ಯರಾದ ಬಸವಣ್ಣ, ಸ್ವಾಮಿ, ಪುಷ್ಪಲತಾ ಹಾಗೂ ದೈಹಿಕ ಶಿಕ್ಷಣ ಪರಿವೀಕ್ಷಕ ಶಾಂತರಾಜು, ಶಿಕ್ಷಣ ಸಂಯೋಜಕ ಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಕಲಿಕಾ ಹಬ್ಬದ ನೋಡಲ್ ಅಧಿಕಾರಿ ಸತೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ ರಾಜು, ಮುಖ್ಯ ಶಿಕ್ಷಕ ಶಾಂತರಾಜು, ಶಿಕ್ಷಕರಾದ ಜಯಶಂಕರ್, ಮರಪ್ಪ, ಚಿತ್ರ ಕಲಾವಿದ ರಾಚಪ್ಪ, ನಾಗರಾಜ್, ಗಿರೀಶ್, ಶಿವಣ್ಣ, ಮಂಜುಳಾ, ಲಕ್ಷ್ಮೀ, ಶಿವರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net