

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮನುಷ್ಯನ ಅನಾರೋಗ್ಯಕ್ಕೆ ಶೇ.90 ರಷ್ಟು ಭಾಗ ಮಾನಸಿಕ ವಿಚಾರಗಳೇ ಕಾರಣವಾಗಿದ್ದು, ನಿರಂತರ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಬೆಳಗಾವಿ ಉಪವಲಯದ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ಅಂಬಿಕಾ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲಸದ ಒತ್ತಡ ವಿವಿಧ ಕಾರಣಗಳಿಂದಾಗಿ ಮನುಷ್ಯರು ಮಾನಸಿಕ ಒತ್ತಡಗಳಿಂದ ತತ್ತರಿಸಿದ್ದಾನೆ. ಕೆಲವರು ಒತ್ತಡ ನಿವಾರಣೆಗಾಗಿ ತಂಬಾಕು ಸೇವನೆ ವಿವಿಧ ಚಟಗಳಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಮನುಷ್ಯರನ್ನು ಒಳ್ಳೆಯ ಮಾರ್ಗದ ಕಡೆ ಕರೆದುಕೊಂಡು ಹೋಗುವುದು ಅವಶ್ಯಕವಾಗಿದೆ ಎಂದರು.
ನಗರ ರೈಲ್ವೆ ನಿಲ್ದಾಣದ ಮುಖ್ಯ ವ್ಯವಸ್ಥಾಪಕ ಅನೀಲ್ ಕುಮಾರ ಮಾತನಾಡಿ, ತುಂಬಾಕು ಸೇವೆನಯಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಜನರಿಗೆ ನಿರಂತರ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಅಲ್ಲದೆ, ತಂಬಾಕು ಮಾರಾಟ, ಉತ್ಪಾದನೆಯನ್ನು ನಿಯಂತ್ರಿಸಬೇಕು ಎಂದರು.
ಬೆಳಗಾವಿ ರೈಲ್ವೆ ಸ್ಟೇಶನ್ ಅಧಿಕಾರಿ ಸಂಜಯ ಕಾರೆಕರ್, ಆರೋಗ್ಯ ಇಲಾಖೆಯ ಇನ್ಸ್‌ಪೆಕ್ಟರ್ ಶಿವಪ್ರಕಾಶ ಬೆನಗಲ್, ಸುನೀಲ ಮೈತ್ರಿ,ವೈದ್ಯಾಧಿಕಾರಿ ಡಾ.ಬಿ. ಬೃಂದಾ,ರಾಜಯೋಗಿನಿ ಸುಲೋಚನಾ ,ಬಿ.ಕೆ.ಶ್ರೀಕಾಂತ , ರಾಜೇಂದ್ರ ಗೋಟಡಕಿ ಇತರರಿದ್ದರು.